ಹಾನಗಲ್(ಹಾವೇರಿ):ವರದಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ಬಳಿ ಪತ್ತೆಯಾಗಿದೆ.
ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ - ಹಾವೇರಿ ಮಳೆ ಸುದ್ದಿ
ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ಬಳಿ ಪತ್ತೆಯಾಗಿದೆ. ಸುಮಾರು ಹತ್ತರಿಂದ ಹದಿನೈದು ಕಿ.ಮೀ ದೂರದವರೆಗೆ ಮೃತದೇಹ ತೇಲಿಕೊಂಡು ಬಂದಿದೆ.
ತಾಲೂಕಿನ ಇನಾಂಲಕಮಾಪುರ ಗ್ರಾಮದ ಚಂದ್ರಶೇಖರ ದಳವಾಯಿ(25), ಕಳೆದ ಆಗಸ್ಟ್ 8, 2020ರ ಸಂಜೆ ವರದಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ. ನದಿಯ ಮಧ್ಯದಲ್ಲಿರೋ ಪ್ರದೇಶದಲ್ಲಿದ್ದ ಎಮ್ಮೆಗಳ ರಕ್ಷಣೆಗೆ ಯುವಕ ನದಿಗೆ ಜಿಗಿದಿದ್ದ. ನಿನ್ನೆ ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡಿದ್ದರೂ, ಯುವಕನ ಸುಳಿವು ಸಿಕ್ಕಿರಲಿಲ್ಲ. ಇಂದು ಸೋಮಾಪುರ ಗ್ರಾಮದ ಬಳಿ ವರದಾ ನದಿ ದಡದಲ್ಲಿ ಮೃತದೇಹ ಪತ್ತೆಯಾಗಿದೆ. ಸುಮಾರು ಹತ್ತರಿಂದ ಹದಿನೈದು ಕಿ.ಮೀ ದೂರ ನೀರಿನಲ್ಲಿ ಮೃತದೇಹ ತೇಲಿಕೊಂಡು ಬಂದಿದೆ.
ಯುವಕನಿಗೆ ಕಳೆದ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.