ಕರ್ನಾಟಕ

karnataka

ETV Bharat / state

ಬೆಂಗಳೂರಿಗರು ಬೊಮ್ಮಾಯಿಗೆ ಸುಳ್ಳಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ : ಮಾಜಿ ಸಂಸದ ಮಂಜುನಾಥ್ ಕುನ್ನೂರು

ಸಿಎಂ ವಿರುದ್ಧ ಕಾಂಗ್ರೆಸ್​ ಮುಖಂಡರ ವಾಗ್ದಾಳಿ - ಬೊಮ್ಮಾಯಿಯನ್ನು ತವರಿನಲ್ಲೇ ಮಣಿಸಲು ಶಪಥ- ಒಗ್ಗಟ್ಟಿನ ಮಂತ್ರ ಜಪಿಸಿದ ನಾಯಕರು

bangaloreans-are-calling-bommai-a-false-chief-minister
ಬೆಂಗಳೂರಿಗರು ಬೊಮ್ಮಾಯಿಗೆ ಸುಳ್ಳಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ : ಮಾಜಿ ಸಂಸದ ಮಂಜುನಾಥ್ ಕುನ್ನೂರು

By

Published : Apr 8, 2023, 10:37 PM IST

ಬೆಂಗಳೂರಿಗರು ಬೊಮ್ಮಾಯಿಗೆ ಸುಳ್ಳಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ : ಮಾಜಿ ಸಂಸದ ಮಂಜುನಾಥ್ ಕುನ್ನೂರು

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರವಷ್ಟೇ ಶಿಗ್ಗಾಂವಿಗೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ತೊಡೆ ತಟ್ಟಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇದೀಗ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಈ ಬಾರಿ ಚುನಾವಣೆಯಲ್ಲಿ ನಾವೆಲ್ಲ ಒಂದಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಸೋಲಿನ ರುಚಿ ತೋರಿಸುತ್ತೇವೆ ಎಂದು ಎಂದಿದ್ದಾರೆ. ಸುಮಾರು 8ಕ್ಕೂ ಅಧಿಕ ಮುಖಂಡರುಗಳು ಸಿಎಂ ಬೊಮ್ಮಾಯಿ ವಿರುದ್ಧ ಮಾಧ್ಯಮಗೋಷ್ಟಿ ಮೂಲಕ ವಾಗ್ಧಾಳಿ ನಡೆಸಿದರು.

ಬೊಮ್ಮಾಯಿ ಹೇಡಿ ಮುಖ್ಯಮಂತ್ರಿ- ಸೋಮಣ್ಣ ಬೇವಿಮರದ.. ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಸೋಮಣ್ಣ ಬೇವಿನಮರದ ಮಾತನಾಡಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಯಾವ ವಿಷಯ ಎಲ್ಲಿ ಮಾತನಾಡಬೇಕು ಎನ್ನುವ ಸಾಮಾನ್ಯ ಜ್ಞಾನವಿಲ್ಲಾ, ಕಾಂಗ್ರೆಸ್ ಪಕ್ಷ ಈಗಾಗಲೇ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಬಿಜೆಪಿಯವರು ಒಂದೇ ಒಂದು ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಪ್ರಕಟ ಮಾಡಿಲ್ಲಾ. ಕೈಯಲ್ಲಿ ಆಗದ ಹೇಡಿ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಬಸವರಾಜ ಬೊಮ್ಮಾಯಿ ಎಂದು ಹರಿಹಾಯ್ದರು.

ಸಿಎಂ ಖುರ್ಚಿಗೆ ಅವಮಾನ ಮಾಡಿದ ಕೀರ್ತಿ ಬೊಮ್ಮಾಯಿಗೆ ಇದೆ. ಬೊಮ್ಮಾಯಿ 2008ರಲ್ಲಿ ಕಾಂಗ್ರೆಸ್ಸಿನ ಹೆಚ್.ಕೆ. ಪಾಟೀಲ್ ಅವರ ಮನೆ ಕದ ತಟ್ಟಿದ್ದರು. ಆದರೆ ಅಜ್ಜಂಪೀರ್ ಖಾದ್ರಿ ಮತ್ತು ಪಾಟೀಲರು ವಿರೋಧಿಸಿದ್ದಕ್ಕೆ ಬಿಜೆಪಿ ಸೇರ್ಪಡೆಯಾದರು. ದೀಪ ಆರಿಹೋಗುವ ಮುನ್ನ ಬೆಂಕಿ ಜೋರಾಗಿ ಪ್ರಕಾಶಿಸುತ್ತದೆ ಹಾಗೆ ಬೊಮ್ಮಾಯಿ ಅವರ ಪರಿಸ್ಥಿತಿ ಆಗಿದೆ. ಕಾಂಗ್ರೆಸ್ ನಾಯಕರೆಲ್ಲಾ ನಾವು ಒಟ್ಟಿಗೆ ಕೂಡಿದ್ದು ಈ ಬಾರಿ ಬಿಜೆಪಿ ನಿಮ್ಮನ್ನು ಸೋಲಿಸಿ ಮನೆಗೆ ಕಳಿಸುತ್ತೇವೆ ಎಂದು ಶಪಥ ಮಾಡುತ್ತೇವೆ ಎಂದು ಸೋಮಣ್ಣ ಬೇವಿನಮರದ ಹೇಳಿದರು.

ದೀನದಲಿತ ಜನರ ನಾಡಿಬಡಿತ ಗೊತ್ತಿಲ್ಲಾ- ಮಂಜುನಾಥ್​ ಕುನ್ನೂರು: ಮಾಜಿ ಸಂಸದ ಮಂಜುನಾಥ್ ಕುನ್ನೂರು ಮಾತನಾಡಿ, ಸಿಎಂ ಬೊಮ್ಮಾಯಿ ಈ ರೀತಿ ರಣವೀಳ್ಯ ನೀಡುವುದನ್ನು ನೋಡಿದರೆ ಈ ಬಾರಿ ಅವರಿಗೆ ಸೋಲಿನ ಭೀತಿ ಎದುರಾಗಿದೆ ಎಂದು ಕಾಣುತ್ತದೆ. ಸಿಎಂ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಮುಂದಿನ ಬಾಗಿಲಿನಿಂದ ಅಲ್ಲಾ ಹಿಂಬಾಗಿಲಿನಿಂದ ಎಂದು ಕುನ್ನೂರು ವಾಗ್ದಾಳಿ ನಡೆಸಿದರು. ಆ ಪಕ್ಷದ ರಾಜ್ಯಾಧ್ಯಕ್ಷರಾಗಲಿಲ್ಲಾ ಜನರ ದೀನದಲಿತ ಜನರ ನಾಡಿಬಡಿತ ಗೊತ್ತಿಲ್ಲಾ. ಬೆಂಗಳೂರಲ್ಲಿ ಮನೆ ಮಾಡಿ ಶಿಗ್ಗಾಂವಿಯಲ್ಲಿ ಮನೆಕಟ್ಟಿಸಿರುವ ಇವರು ಒಂದು ದಿನ ಸಹ ಶಿಗ್ಗಾಂವಿ ಮನೆಯಲ್ಲಿ ಉಳಿದುಕೊಂಡಿಲ್ಲಾ. ಹಾಗೇನಾದರೂ ಉಳಿದುಕೊಂಡಿದ್ದರೆ ದೇವರ ಆಣೆ ಮಾಡಲಿ ಎಂದು ಮಂಜುನಾಥ್ ಕುನ್ನೂರು ಹೇಳಿದರು.

ಕ್ಷೇತ್ರಕ್ಕೆ ಹೊರಗಿನಿಂದ ಬಂದ ಬೊಮ್ಮಾಯಿಯನ್ನ ಈ ಕ್ಷೇತ್ರ ಜನ ಈ ಬಾರಿ ಕ್ಷೇತ್ರದಿಂದ ಹೊರಗೆ ಕಳಿಸುತ್ತಾರೆ. ಬೊಮ್ಮಾಯಿ ನಮ್ಮ ಕ್ಷೇತ್ರಕ್ಕೆ ಬಂದು ಅಭಿವೃದ್ಧಿಯಾಗಿದ್ದಾರೆ ಹೊರತು ಕ್ಷೇತ್ರದ ಅಭಿವೃದ್ಧಿಯಾಗಿಲ್ಲಾ ಎಂದು ಆರೋಪಿಸಿದರು. ಇವರು ಹುಟ್ಟಿದ ಊರಲ್ಲಿ ಜಿಲ್ಲೆಯಲ್ಲಿ ಇವರಿಗೆ ಕ್ಷೇತ್ರವಿಲ್ಲ, ಬದಲಿಗೆ ಶಿಗ್ಗಾಂವಿಗೆ ಬಂದು ಇಲ್ಲಿಯ ಮುಗ್ದ ಜನರನ್ನ ನಂಬಿಸಿ ರಾಜಕೀಯ ಒಳ ಒಪ್ಪಂದ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ ಎಂದು ಕುನ್ನೂರು ಟೀಕಿಸಿದರು.

ವೀರಶೈವ ಸಮಾಜಕ್ಕೆ ಆಗೌರವ ತರುವ ಸಿಎಂ ಇವರಾಗಿದ್ದಾರೆ. ಸಿಎಂ ಬೊಮ್ಮಾಯಿ ಬಿಜೆಪಿಯನ್ನ ಸಮುದ್ರಕ್ಕೆ ಹೋಲಿಸಿ ಉಳಿದ ಪಕ್ಷಗಳನ್ನ ಹಳ್ಳ ಕೊಳ್ಳಗಳಿಗೆ ಹೋಲಿಸಿದ್ದಾರೆ. ಆದರೆ ಸಿಎಂ ನಮ್ಮ ಕ್ಷೇತ್ರದ ಜನರ ಕಣ್ಣಲ್ಲಿ ಸಮುದ್ರದಲ್ಲಿನ ಕಸಕಸಿ ಇದ್ದಂತೆ, ಬೆಂಗಳೂರಿಗರು ಬೊಮ್ಮಾಯಿಗೆ ಸುಳ್ಳಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಮಂಜುನಾಥ್​ ಕುನ್ನೂರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಮೂಡುಬಿದಿರೆಯಲ್ಲಿ ಮೋಡಿ ಮಾಡ್ತಾರಾ ಮಿಥುನ್ ರೈ?... ಬಿಜೆಪಿ ಟಿಕೆಟ್​ ಯಾರಿಗೆ?

ABOUT THE AUTHOR

...view details