ಹಾವೇರಿ: ಮಗಳನ್ನು ಬೇರೊಬ್ಬ ಹುಡುಗ ಪ್ರೀತಿಸುತ್ತಿರುವ ವಿಷಯ ಮುಚ್ಚಿಟ್ಟಿದ್ದ ಸಂಬಂಧಿಕನ ಮಗನಿಗೆ ಹುಡುಗಿ ತಂದೆಯ ಕಡೆಯವರು ಹಲ್ಲೆ ಮಾಡಿರುವ ಘಟನೆ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
21 ವರ್ಷದ ಪೊನ್ನಪ್ಪ ಹಲ್ಲೆಗೊಳಗಾದ ಯುವಕನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊನ್ನಪ್ಪನ ಸಂಬಂಧಿಯ ಮಗಳು ಬೇರೆ ಹುಡುಗನನ್ನು ಪ್ರೀತಿಸುತ್ತಿರುವುದು ಪೊನ್ನಪ್ಪನಿಗೆ ತಿಳಿದಿತ್ತು. ಆದರೆ ಆತ ಈ ವಿಷಯನ್ನು ಸಂಬಂಧಿಕರ ಬಳಿ ಹೇಳದೆ ಮುಚ್ಚಿಟ್ಟಿದ್ದನಂತೆ. ಇದರಿಂದ ಕೋಪಗೊಂಡಿದ್ದ ಹುಡುಗಿ ಕಡೆಯವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.