ಕರ್ನಾಟಕ

karnataka

ETV Bharat / state

ಮಹಿಳೆ ಕಾಲುಗಳ ಮೇಲೆ ಹರಿದ ಟಿಪ್ಪರ್​..ಲಾರಿ ಭಾರಕ್ಕೆ ಪಾದಗಳು ಛಿದ್ರ ಛಿದ್ರ! - ಹಾಸನ ರಸ್ತೆ ಅಪಘಾತ ಸುದ್ದಿ

ಟಿಪ್ಪರ್​ ಮತ್ತು ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಮಹಿಳೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ

women legs cut in road accident at Hassan, Hassan road accident news, Tipper hit to bike in Hassan, ಹಾಸನದಲ್ಲಿ ರಸ್ತೆ ಅಪಘಾತದಲ್ಲಿ ಮಹಿಳೆಯ ಎರಡು ಕಾಲುಗಳು ಕಟ್​, ಹಾಸನ ರಸ್ತೆ ಅಪಘಾತ ಸುದ್ದಿ, ಹಾಸನದಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಟಿಪ್ಪರ್​,
ಅಪಘಾತ ಮಹಿಳೆಯ ಕಾಲು ಕಟ್

By

Published : Jan 31, 2022, 1:54 PM IST

ಹಾಸನ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ಎರಡು ಕಾಲುಗಳು ನಜ್ಜುಗುಜ್ಜಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ. ಮಂಜುಳಾ (39) ಅಪಘಾತಕ್ಕೊಳಗಾದ ಮಹಿಳೆಯಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಲಾರಿಯ ಭಾರಕ್ಕೆ ನಜ್ಜಾದ ಪಾದಗಳು

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಲ್ಲು ಸೂರನಹಳ್ಳಿಯ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಅಮ್ಮನ ಕಟ್ಟೆ ಗ್ರಾಮದ ಮಂಜುಳಾ ಸಂತೆ ದಿನವಾದ ಇಂದು ಕುರಿಗಳನ್ನು ಖರೀದಿಸಲು ಬಂದಿದ್ದರು. ಸಂತೆಯ ಸಮೀಪ ಟಿಪ್ಪರ್ ಲಾರಿ ಚಾಲಕ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದರೂ ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ, ಮಂಜುಳಾ ಸ್ಕೂಟಿಗೆ ಟಿಪ್ಪರ್​ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಗಳ ಚಕ್ರಕ್ಕೆ ಮಂಜುಳಾ ಎರಡು ಕಾಲುಗಳು ಸಿಲುಕಿಕೊಂಡು ನಜ್ಜಾಗಿವೆ.

ಓದಿ:ತಮಿಳಿನ ಸೂಪರ್​ ಹಿಟ್​ ಚಿತ್ರ ‘ಮಾನಾಡು’ ತೆಲುಗಿಗೆ ರಿಮೇಕ್​.. ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೀರೋ!?

ಅಪಘಾತವಾದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಕಾಲು ಕಳೆದುಕೊಂಡ ಮಹಿಳೆಯ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರು ತಕ್ಷಣ ಆ್ಯಂಬುಲೆನ್ಸ್​ಗೆ ಕರೆ ಮಾಡಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಇನ್ನು ಈ ಸಂಬಂಧ ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಟಿಪ್ಪರ್ ಲಾರಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಚಾಲಕನ ಪತ್ತೆಗೆ ಜಾಲ ಬೀಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details