ಕರ್ನಾಟಕ

karnataka

ಹಾಸನ : ಅಕ್ರಮ ಸಂಬಂಧಕ್ಕೆ ಒಪ್ಪದ್ದಕ್ಕೆ ಮಹಿಳೆ ಕೊಲೆ.. ಆರೋಪಿ ಅರೆಸ್ಟ್​

ಸದ್ಯ ಜೈಲು ಕಂಬಿ ಎಣಿಸುತ್ತಿರುವ ಲತೇಶ್ 10 ವರ್ಷದ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಜೈಲು ಸೇರಿದ್ದ. ಆ ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ವಾಸದ ಬಳಿಕ ಕೇಸ್ ಖುಲಾಸೆಯಾಗಿ ಬಿಡುಗಡೆಯಾಗಿದ್ದ..

By

Published : Mar 19, 2022, 7:42 PM IST

Published : Mar 19, 2022, 7:42 PM IST

accused-arrest
ಆರೋಪಿ ಅರೆಸ್ಟ್​

ಹಾಸನ :ಅಕ್ರಮ ಸಂಬಂಧಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಹಾಸನದ ದೊಡ್ಡಪುರದಲ್ಲಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಲತೇಶ್ (35) ಎಂಬಾತ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿಯಾಗಿದ್ದಾನೆ. ಅಕ್ರಮ ಸಂಬಂಧವನ್ನು ಒಪ್ಪದಿದ್ದಕ್ಕೆ ಮಾ.16ರಂದು ಗ್ರಾಮದ ಮಹಿಳೆಯನ್ನು ಆರೋಪಿ ಲತೇಶ್​ ಕೊಚ್ಚಿ ಕೊಲೆ ಮಾಡಿದ್ದ. ಅವಿವಾಹಿತನಾಗಿದ್ದ ಲತೇಶ್​ ಆ ಮಹಿಳೆಯನ್ನು ಮದುವೆ ಮಾಡಿಕೊಳ್ಳಲು ಪೀಡಿಸುತ್ತಿದ್ದ. ಇದನ್ನು ನಿರಾಕರಿಸಿದಾಗ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತ್ತೆಯಾದದ್ದು ಹೇಗೆ?:ತನಿಖೆಯ ವೇಳೆಪೊಲೀಸ್ ಶ್ವಾನಗಳು ಗ್ರಾಮದೊಳಗೆ ಹೋಗಿದ್ದರಿಂದ ಲತೇಶ್​ನನ್ನು ಅನುಮಾನದ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಕೊಲೆ ಕೇಸ್ ಬಯಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ದಾಳಿ ಮಾಡಿ‌ ತಾನೇ ಕೊಂದಿರುವುದಾಗಿ ಆರೋಪಿ ಲತೇಶ್​​ ಒಪ್ಪಿದ್ದಾನೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

10 ವರ್ಷದ ಹಿಂದೆ ಬಾಲಕಿ ಅತ್ಯಾಚಾರ ನಡೆಸಿದ್ದ:ಸದ್ಯ ಜೈಲು ಕಂಬಿ ಎಣಿಸುತ್ತಿರುವ ಲತೇಶ್ 10 ವರ್ಷದ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಜೈಲು ಸೇರಿದ್ದ. ಆ ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ವಾಸದ ಬಳಿಕ ಕೇಸ್ ಖುಲಾಸೆಯಾಗಿ ಬಿಡುಗಡೆಯಾಗಿದ್ದ. ಬಳಿಕವೂ ಬದಲಾಗದ ಲತೇಶ್ ಇದೀಗ ಪರಿಚಿತ ಮಹಿಳೆಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ಸಹಕರಿಸದಿದ್ದಾಗ ಹತ್ಯೆ ಮಾಡಿದ್ದ.

ಓದಿ:ಓವರ್​ಟೇಕ್​ ಮಾಡಲು ಹೋಗಿ ಮರಕ್ಕೆ ಗುದ್ದಿದ ಕಾರು.. ಮೂವರು ಸಾವು, ಓರ್ವ ಗಂಭೀರ

ABOUT THE AUTHOR

...view details