ಕರ್ನಾಟಕ

karnataka

ETV Bharat / state

ನೊಂದವರಿಗೆ ನ್ಯಾಯ ಕೊಡಿಸಿದಾಗ ಮಾತ್ರ ಪೊಲೀಸ್ ವೃತ್ತಿ ಸಾರ್ಥಕ: ಐಜಿಪಿ ಪ್ರವೀಣ್ ಮಧುಕರ್

ಹಾಸನದ ಡಿಎಆರ್ ಕವಾಯತ್ ಮೈದಾನದಲ್ಲಿ ನಡೆದ ಪೊಲೀಸ್ ತರಬೇತಿ ಶಾಲೆ 16ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ ಇಂದು ನಡೆಯಿತು. ರಾಷ್ಟ್ರ ಹಾಗೂ ಪೊಲೀಸ್ ಧ್ವಜಾರೋಹಣ ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

By

Published : Mar 31, 2021, 7:29 PM IST

police
police

ಹಾಸನ:ಪೊಲೀಸ್ ಕೆಲಸ ಎಂದರೆ ಕೇವಲ ಸಂಬಳ ಬರುತ್ತದೆ ಎಂದುಕೊಳ್ಳುವುದಕ್ಕಿಂತ ನೊಂದವರಿಗೆ ನ್ಯಾಯ ಕೊಡಿಸಿದಾಗ ಮಾತ್ರ ಪೊಲೀಸ್ ವೃತ್ತಿ ಸಾರ್ಥಕವಾಗುತ್ತದೆ ಎಂದು ಮೈಸೂರಿನ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಾದ ಪ್ರವೀಣ್ ಮಧುಕರ್ ಪವಾರ್ ಅಭಿಪ್ರಾಯಪಟ್ಟರು.

ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ

ಹಾಸನದ ಡಿಎಆರ್ ಕವಾಯತ್ ಮೈದಾನದಲ್ಲಿ ನಡೆದ ಪೊಲೀಸ್ ತರಬೇತಿ ಶಾಲೆ 16ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಸಮವಸ್ತ್ರವನ್ನು ಧರಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕೇವಲ ವಿಶೇಷ ಯೋಗ್ಯತೆಯನ್ನು ಪಡೆದವರಿಗೆ ಮಾತ್ರ ಸಾಧ್ಯ. ಪೊಲೀಸ್ ಹುದ್ದೆ ಅದೊಂದು ಸೇವೆಯಾಗಿದ್ದು, ಕೇವಲ ಸಂಬಳಕ್ಕಾಗಿ ಮಾಡುವ ಕೆಲಸವಲ್ಲ. ಪೊಲೀಸ್ ಸಮವಸ್ತ್ರದೊಂದಿಗೆ ಹೊಂದಿಕೊಂಡಿರುವ ಗೌರವ ಮತ್ತು ಬಲಿದಾನಕ್ಕಾಗಿ ಮಾಡುವ ಕೆಲಸವಾಗಿದೆ. ನಿಮ್ಮ ಕೆಲಸದಲ್ಲಿ ನೀವು ಯಾವುದೇ ರೀತಿಯ ಸೋಮಾರಿತನ, ದುರಾಸೆ ಇತರೆ ಗುಣಗಳನ್ನು ಮೈಗೂಡಿಸಿಕೊಳ್ಳದೆ, ಒಳ್ಳೆಯ ಮಾದರಿ ಪೊಲೀಸರಾಗಿ ಕೆಲಸ ಮಾಡಬೇಕು ಎಂದರು.

​ಕಾರ್ಯಕ್ರಮದಲ್ಲಿ ಮೊದಲು ಪೊಲೀಸ್ ತರಬೇತಿ ಶಾಲೆ 16ನೇ ತಂಡದ ನಾಗರೀಕ ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ ಮಾಡಲಾಯಿತು. ರಾಷ್ಟ್ರ ಹಾಗೂ ಪೊಲೀಸ್ ಧ್ವಜಾರೋಹಣ ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ತರಬೇತಿ ವೇಳೆ ಉತ್ತಮವಾಗಿ ಭಾಗವಹಿಸಿದವರನ್ನು ಗುರುತಿಸಿ ಬಹುಮಾಣ ವಿತರಣೆ ಮಾಡಿದರು. ​ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಹೆಚ್ಚುವರಿ ಪೊಲಿಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details