ಕರ್ನಾಟಕ

karnataka

ETV Bharat / state

ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

ದೊಡ್ಡಕೊಂಡಗೊಳ ಗ್ರಾಮದ ವ್ಯಾಪ್ತಿಯ ಸುತ್ತಲು ಹಲವು ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

By

Published : Feb 6, 2019, 1:14 PM IST

Updated : Feb 6, 2019, 2:12 PM IST

ಬೋನಿಗೆ ಬಿದ್ದ ಚಿರತೆ

ದೊಡ್ಡಕೊಂಡಗೊಳ ಗ್ರಾಮದ ವ್ಯಾಪ್ತಿಯ ಸುತ್ತಲು ಹಲವು ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಹಾಸನ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ನಗರ ಹೊರ ವಲಯದ ದೊಡ್ಡಕೊಂಡಗೊಳ ಗ್ರಾಮದಲ್ಲಿ ನಡೆದಿದೆ.

ವ್ಯಾಪ್ತಿಯ ಸುತ್ತಲು ಹಲವು ತಿಂಗಳಿಂದ ಉಪಟಳ ನೀಡುತ್ತಿತ್ತು. ಅಲ್ಲದೆ, ಹಲವು ಕರು ಮತ್ತು ನಾಯಿಗಳನ್ನು ಹೊತ್ತೊಯ್ದಿದ್ದಿತ್ತು. ಚಿರತೆ ಸೆರೆಯಾಗಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ‌‌. ಇನ್ನು ಚಿರತೆಯನ್ನು ಮತ್ತೊಂದು ಕಾಡಿಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ಮಾಡುಕೊಂಡಿದ್ದಾರೆ ಎನ್ನಲಾಗಿದೆ.

ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಚಿರತೆ ಹಿಡಿಯಲು ಗ್ರಾಮದ ಹೊಲದಲ್ಲಿ ಬೋನನ್ನು ಇಡಲಾಗಿತ್ತು. ನಗರದ ಪಕ್ಕದಲ್ಲೇ ಚಿರತೆ ಹಾವಳಿ ಹೆಚ್ಚಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ವಿತ್ತು. ಈಗ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Last Updated : Feb 6, 2019, 2:12 PM IST

ABOUT THE AUTHOR

...view details