ಕರ್ನಾಟಕ

karnataka

ETV Bharat / state

ಚಂದ್ರಯಾನ- 2ರ ಕುರಿತು ಹಿರಿಯ ವಿಜ್ಞಾನಿ ಟಿ.ಎನ್.ಸುರೇಶ್‍ಕುಮಾರ್ ಹೇಳಿದ್ದೇನು? - CHANDRAYANA 2 UPDATEd news

ಸೆ.21ರ ವರೆಗೆ ವಿಕ್ರಂ ಜೀವಂತವಾಗಿರುವುದರಿಂದ ಯೋಜನೆ ಸಫಲಗೊಳಿಸಲು ಇಸ್ರೋ ವಿಜ್ಞಾನಿಗಳು ಹಗಲು ಇರುಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹಲವು ವಿಜ್ಞಾನ ಸಂಸ್ಥೆಗಳು  ಕೈಜೋಡಿಸಿವೆ. ಈ ಕುರಿತು ಇಸ್ರೋ ಹಿರಿಯ ವಿಜ್ಞಾನಿ, ಚಂದ್ರಯಾನ -1ರಲ್ಲಿ ಭಾಗವಹಿಸಿದ್ದ ಟಿ.ಎನ್.ಸುರೇಶ್‍ಕುಮಾರ್ ಈ ಟಿವಿ ಭಾರತದ ಜತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಚಂದ್ರಯಾನ- 2

By

Published : Sep 11, 2019, 1:26 PM IST

ಹಾಸನ: ಭಾರತ ವಿಜ್ಞಾನ ಲೋಕದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ- 2. ಇಡೀ ವಿಜ್ಞಾನ ಲೋಕದ ಗಮನ ಸೆಳೆದಿರುವ ಈ ಯೋಜನೆ ವಿಶ್ವದ ಗಮನ ಸೆಳೆದಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣಧ್ರುವಕ್ಕೆ ಚಂದ್ರಯಾನ ಸ್ಪರ್ಶ ಮಾಡಿದೆ. ಇದು ವಿಶ್ವದ ಮೊದಲ ಪ್ರಯತ್ನ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.

ಇಸ್ರೋ ಯೋಜಿಸಿದಂತೆ ಆರ್ಬಿಟರ್​ನಿಂದ ಬೇರ್ಪಟ್ಟ ವಿಕ್ರಂ ಸೆಪ್ಟೆಂಬರ್​ 7ರಂದು ಶಶಿ ಅಂಗಳದಲ್ಲಿ ಸಾಫ್ಟ್​ ಲ್ಯಾಂಡ್​ ಆಗಲು ವಿಫಲವಾಗಿತ್ತು. ಆದರೆ ಹಾರ್ಡ್​ ಲ್ಯಾಂಡ್​ ಆಗಿದ್ದು, ಕಡಿಮೆ ಸಾಧನೆಯೇನೂ ಅಲ್ಲ. ಸೆ.21ರ ವರೆಗೆ ವಿಕ್ರಂ ಜೀವಂತವಾಗಿರುವುದರಿಂದ ಯೋಜನೆ ಸಫಲಗೊಳಿಸಲು ಇಸ್ರೋ ವಿಜ್ಞಾನಿಗಳು ಹಗಲು ಇರುಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹಲವು ವಿಜ್ಞಾನ ಸಂಸ್ಥೆಗಳು ಕೈಜೋಡಿಸಿವೆ. ಈ ಕುರಿತು ಇಸ್ರೋ ಹಿರಿಯ ವಿಜ್ಞಾನಿ, ಚಂದ್ರಯಾನ -1ರಲ್ಲಿ ಭಾಗವಹಿಸಿದ್ದ ಟಿ.ಎನ್.ಸುರೇಶ್‍ಕುಮಾರ್ ಈ ಟಿವಿ ಭಾರತದ ಜತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹಿರಿಯ ವಿಜ್ಞಾನಿ ಟಿ.ಎನ್.ಸುರೇಶ್‍ಕುಮಾರ್ ಅಭಿಪ್ರಾಯ

1. ಚಂದ್ರಯಾನ- 2 ಕುರಿತು ಏನು ಹೇಳುತ್ತೀರಿ ಸರ್?

ಇದು ವಿಜ್ಞಾನ ಲೋಕದ ಸವಾಲಿನ ಯೋಜನೆ. 2008 ರಲ್ಲಿ ಚಂದ್ರಯಾನ ಸಿದ್ಧತೆ ಪ್ರಾರಂಭಿಸಲಾಗಿತ್ತು. ಜುಲೈ 15ಕ್ಕೆ ಆರಂಭವಾಗಬೇಕಿತ್ತು. ಆದರೆ ರಾಕೆಟ್‍ನಲ್ಲಿ ಆದ ತಾಂತ್ರಿಕ ದೋಷದಿಂದ ಜು.22ಕ್ಕೆ ಬಾಹುಬಲಿ ಉಡ್ಡಯನ ಮಾಡಲಾಗಿತ್ತು. ಚಂದ್ರನಲ್ಲಿ ಖನಿಜ ಸಂಪತ್ತು, ನೀರಿನ ಪ್ರಮಾಣ ಹಾಗೂ ಇನ್ನಿತರ ಮೇಲ್ಪದರದ ಬಗ್ಗೆ ತಿಳಿದುಕೊಳ್ಳುವುದು ಚಂದ್ರಯಾನ -2 ರ ಉದ್ದೇಶ. ಅಮೆರಿಕ, ರಷ್ಯಾ, ಚೀನಾ ಈ ಪ್ರಯತ್ನ ಮಾಡಿವೆ. ಇದರ ಮುಂದುವರಿದ ಭಾಗ ಎಂಬಂತೆ ಭಾರತೀಯ ವಿಜ್ಞಾನಿಗಳು ಹೊಸ ತಂತ್ರಜ್ಞಾನ ಬಳಸಿ ಲ್ಯಾಂಡರ್, ರೋವರ್, ಆರ್ಬಿಟ್‍ಗಳನ್ನು ಸಿದ್ದಪಡಿಸಿ ಉಡ್ಡಯನ ಮಾಡಿರುವುದು ಈ ಯೋಜನೆಯ ವಿಶೇಷ.

2.ಚಂದ್ರಯಾನದ ಪೂರ್ವ ತಯಾರಿ ಹೇಗಿತ್ತು ?

ಈ ಹಿಂದೆ ಇಂತಹ ಯಾನಗಳಿಗೆ ಬೇರೆ ದೇಶಗಳ ಲ್ಯಾಂಡರ್ ನ ಸಹಾಯ ಕೇಳಲಾಗುತ್ತಿತ್ತು. ಅಂದ ಹಾಗೆ ರಷ್ಯಾದ ನೆರವು ಕೇಳಲಾಗಿತ್ತು. ಆದರೆ, ರಷ್ಯಾ ಕೊನೆಗಳಿಗೆಯಲ್ಲಿ ಇಲ್ಲ ಎಂದಿದ್ದರಿಂದ ಇಸ್ರೋ ಸ್ವತಂತ್ರವಾಗಿ ಯಾನಕ್ಕೆ ಮುಂದಾಗಿತ್ತು. ಅದರ ಫಲವಾಗಿಯೇ ಚಂದ್ರಯಾನ- 2ಗೆ ಬೇಕಾದ ರಾಕೆಟ್, ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಪ್ರಜ್ಞಾ ನ್ ಸಿದ್ದಪಡಿಸಲಾಗಿದೆ.ಇದಕ್ಕೆ ಸುಮಾರು 6-7 ವರ್ಷ ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಇಸ್ರೋ ಸೆಂಟರ್ ನಲ್ಲಿ ಈ ಪ್ರಯೋಗ ನಡೆದಿದೆ.

ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಸುವ ದೊಡ್ಡ ಯೋಜನೆ ಇದು:

ಇದುವರೆಗೆ ಪ್ರಯೋಗ ಮಾಡಿರುವ ದೇಶಗಳು ಚಂದ್ರನ ಬೇರೆಬೇರೆ ಭಾಗಗಳಿಗೆ ಇಳಿಸುವ ಪ್ರಯತ್ನ ಮಾಡಿವೆ. ಆದರೆ ಭಾರತ ಮಾತ್ರ ತನ್ನದೇ ತಂತ್ರಜ್ಞಾನ ಬಳಸಿಕೊಂಡು ದಕ್ಷಿಣ ಧ್ರುವಕ್ಕೆ ಇಳಿಸುವ ದೊಡ್ಡ ಯೋಜನೆ ರೂಪಿಸಿದೆ. ಇದುವರೆಗೂ ಯಾವ ದೇಶಗಳು ಈ ಭಾಗಕ್ಕೆ ತಲುಪುವ ಪ್ರಯತ್ನ ಮಾಡಿಲ್ಲ. ಇದೊಂದು ಸವಾಲಿನ ಕೆಲಸ. ತಮಿಳುನಾಡಿನ ಸೇಲಂ ಭಾಗದಿಂದ ಕಲ್ಲಿನಪುಡಿ ಬಳಸಿ ಕೊಂಡು ಅಧ್ಯಯನ ಹಾಗೂ ಪ್ರಯೋಗ ನಡೆಸಲಾಗಿದೆ ಎಂದು ಸುರೇಶ್​ ಕುಮಾರ್ ಹೇಳಿದರು.

3.ನೌಕೆಯ ಉಪಕರಣ ಕುರಿತು ಏನು ಹೇಳುತೀರಿ?

ಚಂದ್ರಯಾನ- 2ದಲ್ಲಿ ‘ಬಾಹುಬಲಿ’ ಹೆಸರಿನ ರಾಕೆಟ್ ಸಿದ್ದಪಡಿಸಿ ಕೊಂಡು ಅದರ ಜೊತೆಯಲ್ಲಿ ಆರ್ಬಿಟರ್, (ವಿಕ್ರಮ್) ಲ್ಯಾಂಡರ್, ರೋವರ್ (ಪ್ರಜ್ಞಾನ್) ಬಳಸಲಾಗಿದೆ. ಇದರ ತೂಕ ಸುಮಾರು 1470 ಕೆ.ಜಿ.. ಅದರಲ್ಲಿ ಪ್ರಜ್ಞಾನ್ 27 ಕೆ.ಜಿ. ತೂಕ ಹೊಂದಿದೆ. ವಿಕ್ರಮ್ ಲ್ಯಾಂಡರ್ ಗರ್ಭ ದೊಳಗೆ ಮಗುವಿನಂತೆ ಪ್ರಗ್ಯಾನ್​ ರಕ್ಷಿಸಲ್ಪಟ್ಟಿರುತ್ತದೆ. ಆರ್ಬಿಟರ್​​ಗೆ ಚಂದ್ರನ ಸುತ್ತಲು ಸುಮಾರು 7 ಆಯಸ್​​​ ಇದೆ. ಈ ಮೂರು ಉಪಕರಣಗಳ ಈ ಚಲನ ವಲನದ ಬಗ್ಗೆ ನೌಕೆಗೆ ಅಳವಡಿಸಿರುವ ಕ್ಯಾಮರಾಗಳು ಆಗಾಗ ಭೂಮಿಗೆ ವರದಿ ನೀಡುತ್ತವೆ. ಇವುಗಳ ಸೋಲಾರ್​ ಪ್ಯಾನೆಲ್​​ಗಳಿಗೆ ಸೂರ್ಯನ ಕಿರಣಗಳು ಸಿಗದಿದ್ದಾಗ ಸಂಪರ್ಕ ಕಳೆದುಕೊಳ್ಳುತ್ತವೆ. ಮತ್ತೆ ಆಂಟೆನಾ ಕೆಲಸ ಮಾಡಿದಾಗ ಸಂಪರ್ಕಕ್ಕೆ ಬರುತ್ತದೆ. ಇದು 100 ಸೆಕೆಂಡಿಗೆ 35 ಕಿ.ಮೀ ದೂರ ಕ್ರಮಿಸುವ ಶಕ್ತಿಹೊಂದಿದೆ. ಹೀಗಾಗಿ ವಿಕ್ರಂ ಸಂಪರ್ಕಕ್ಕೆ ಸಿಗುತ್ತಿಲ್ಲ, ಆದರೆ ಇನ್ನು ಸಮಯಾವಕಾಶ ಇರುವುದರಿಂದ ಗುರಿ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

4.ಚಂದ್ರಯಾನಕ್ಕೆ ಅದೇ ದಿನಾಂಕ ಆಯ್ಕೆ ಮಾಡಿಕೊಂಡಿದ್ದೇಕೆ?

ಭಾರತದಲ್ಲಿ ವಿಜ್ಞಾನ ಲೋಕಕ್ಕೂ ಶಾಸ್ತ್ರಕ್ಕೂ ಅವಿನಾಭಾವ ಸಂಬಂಧವಿದೆ. ಸೆಪ್ಟೆಂಬರ್ ತಿಂಗಳ 7 ನೇ ತಾರೀಖಿನಂದು ಉಡಾವಣೆಗೆ ಸೂಕ್ತ ಆಯ್ಕೆ ಮಾಡಿಕೊಳ್ಳಲಾಗಿದೆ. ಸೆ.14 ರಂದು ಹುಣ್ಣಿಮೆ ಇರುವುದರಿಂದ ಏಳು ದಿನ ಹಿಂದಕ್ಕೆ ಏಳು ದಿನ ಮುಂದಕ್ಕೆ ದಿನ ನಿಗದಿಯಾಗಿದೆ. ಈ 14 ದಿನ ಚಂದ್ರನ ಮೇಲೆ ಬೆಳಕು ಇರುತ್ತದೆ. ಆರ್ಬಿಟರ್​ , ಲ್ಯಾಂಡರ್ ವಿಕ್ರಂಗೆ ಸೂರ್ಯಕಿರಣ ತುಂಬಾ ಅವಶ್ಯಕವಾಗಿರುವುದರಿಂದ ಈ ದಿನಾಂಕಗಳನ್ನ ಆಯ್ಕೆ ಮಾಡಲಾಗಿದೆ.

5.ಭಾರತೀಯ ತಂತ್ರಜ್ಞಾನ ಬಳಕೆ ?

ಚಂದ್ರಯಾನ - 2 ಕ್ಕೆ ಭಾರತೀಯ 8 ವೈಜ್ಞಾನಿಕ ಉಕರಣಗಳನ್ನು ಬಳಲಾಗಿದೆ. ಅಂದರೆ ಆರ್ಬಿಟರ್​ ಲ್ಯಾಂಡರ್, ಪ್ರಜ್ಞಾನ್​ ಬಳಸಿಕೊಳ್ಳಲಾಗಿದೆ. ಒಟ್ಟು 13 ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಳ್ಳಲಾಗಿದ್ದು, ಅದರಲ್ಲಿ ನಾಸಾದವರು ಒಂದು ಉಪಕರಣ ಇಟ್ಟಿದ್ದಾರೆ ಇದು ಚಂದ್ರ ಮತ್ತು ಭೂಮಿ ನಡುವೆ ವ್ಯತ್ಯಾಸ ಗಮನಿಸುತ್ತಿರುತ್ತದೆ. ಚಂದ್ರಯಾನದ ಬಗ್ಗೆ ಡೇಟಾ ಭೂಮಿಯ ಮೇಲಿದ್ದು, ಎನ್ನುವನ್ನು ಗಮನಿಸಲಾಗುತ್ತಿರುತ್ತದೆ. ಆಂಟೇನಾ ಕೆಲವೊಂದು ಕಡೆ ಕಡಿತಗೊಂಡ ಸಂಪರ್ಕ ಸಾಧ್ಯವಾಗುವುದಿಲ್ಲ. ಇದಕ್ಕೆ ವಿದೇಶಿ ತಂತ್ರಜ್ಞಾನ ಬಳಸದೇ ಇರುವುದು ವಿಶೇಷ

6.978 ಕೋಟಿ ರೂ. ಹಣ ಪೋಲಾಯಿತೇ?

ನಿಜಕ್ಕೂ ವಿಜ್ಞಾನದ ಪ್ರಯೋಗಗಳಿಗೆ ಹೂಡಿಕೆ ಮಾಡುವ ಹಣ ಪೋಲು ಅಂತ ಹೇಳಲು ಸಾಧ್ಯವಿಲ್ಲ. ಇದೊಂದು ರೀತಿ ವಿಜ್ಞಾನ ಲೋಕದ ಉನ್ನತೀಕರಣಕ್ಕೆ ನೆರವಾಗಿದೆ ಎನ್ನಬಹುದು. ಮಂಗಳಯಾನ, ಉಪಗ್ರಹ ಉಡಾವಣೆ ,ಚಂದ್ರಯಾನ 3ಕ್ಕೂ ಇದನ್ನ ಬಳಸಿಕೊಳ್ಳಬಹುದಾಗಿದೆ. ಭಾರತದ ಇಸ್ರೋ ಸಾಧನೆಯನ್ನು ಇಡೀ ವಿಶ್ವವೇ ಮೆಚ್ಚುವಾಗ ಇದನ್ನು ನಾವು ದುಂದು ವೆಚ್ಚ ಎಂದು ಪರಿಗಣಿಸುವಂತಿಲ್ಲ.

7.ಚಂದ್ರಯಾನದಲ್ಲಿ ಯಾವ ಉಪಕರಣ ಬಳಸಲಾಗಿದೆ?

  • ಟೆರೇನ್​ ಮ್ಯಾಪಿಂಗ್ ಕ್ಯಾಮೆರಾ: ಇದರಲ್ಲಿ ಎರಡು ಕ್ಯಾಮೆರಾಗಳಿದ್ದು, ಚಂದ್ರನ ಮೇಲ್ಮೈಯ ತ್ರಿಡಿ ಆಯಾಮದ ಫೋಟೋಗಳನ್ನ ತೆಗೆಯಲಿದೆ.
  • ಕಾಲಿಮೇಟೆಡ್ ಲಾರ್ಜ್ ಆರೇ ಸಾಫ್ಟ್ ಎಕ್ಸ್​​ರೇ ಸ್ಪೆಕ್ಟ್ರೋಮೀಟರ್ : ಮೇಲ್ಮೈಯಲ್ಲಿರುವ ಖನಿಜಗಳನ್ನು ಪತ್ತೆ ಹಚ್ಚುವ ಸಾಧನ.
  • ಸೋಲಾರ್ ಎಕ್ಸ್​​ರೇ ಮಾನಿಟರ್: ಸೌರ ಎಕ್ಸ್​​​ರೇಗಳ ಅಸ್ತಿತ್ವ ಪತ್ತೆ ಹಚ್ಚುವ ಸಾಧನ.
  • ಚಂದ್ರಾಸ್‌ ಅಟ್‌ಮಾಸ್ಫಿಯರ್‌ ಕಾಂಪೊಸಿಷನ್‌ ಎಕ್ಸ್‌ಪ್ಲೋರರ್‌ : ವಾತಾವರಣದ ಸ್ವರೂಪ ಗ್ರಹಿಸುವ ಸಾಧನ.
  • ಸಿಂಥೆಟಿಕ್‌ ಅಪರ್ಚರ್‌ ರೇಡಾರ್‌: ರೇಡಿಯೋ ಅಲೆಗಳ ಮೂಲಕ ಮೇಲ್ಮೈ ಗ್ರಹಿಸಬಲ್ಲ ಉಪಕರಣ
  • ಇಮೇಜಿಂಗ್‌ ಇನ್‌ಫ್ರಾರೆಡ್‌ ಸ್ಪೆಕ್ಟ್ರೋಮೀಟರ್‌: ಮೇಲ್ಮೈಯಲ್ಲಿರುವ ನೀರಿನ ಅಂಶಗಳನ್ನು ಗ್ರಹಿಸಬಲ್ಲ ಸಾಧನ.
  • ಆರ್ಬಿಟರ್‌ ಹೈ ರೆಸೊಲ್ಯೂಶನ್‌ ಕ್ಯಾಮೆರಾ :ಲ್ಯಾಂಡರ್ ಮತ್ತು ರೋವರ್ ನೆಲಕ್ಕಿಳಿಯುವ ಪ್ರದೇಶವನ್ನು ಅತ್ಯಂತ ಸೂಕ್ಷ್ಮವಾಗಿ ಬಿಂಬಗಳ ಮೂಲಕ ಗ್ರಹಿಸುವ ಉಪಕರಣ.
  • ಲೂನಾರ್‌ ಸಿಸ್ಮಿಕ್‌ ಆಕ್ಟಿವಿಟಿ ಸಾಧನ :ಚಂದ್ರನಲ್ಲಿ ಭೂಕಂಪನ ಆಗುತ್ತದಯೇ ಎಂದು ಪರೀಕ್ಷಿಸುವ ಉಪಕರಣ
  • ಥರ್ಮೋಫಿಸಿಕಲ್‌ ಎಕ್ಸ್‌ಪರಿಮೆಂಟ್‌ ಸಾಧನ:ಮೇಲ್ಮೈ ವಾತಾವರಣದ ಉಷ್ಣ ಗ್ರಹಿಸುವ ಉಪಕರಣ.

8.ಮಹತ್ವದ ಪಾತ್ರ ಏನು?

ಒಟ್ಟು 620 ಸರಕಾರಿ ಮತ್ತು ಖಾಸಗಿ ಕಂಪನಿಗಳು ಮತ್ತು ಐಐಎಸ್​​​ಸಿ, ಐಐಟಿ ಸೇರಿದಂತೆ ದೇಶದ ಪ್ರಮುಖ 15 ಶಿಕ್ಷಣ ಕೇಂದ್ರಗಳು ಮಹತ್ವದ ಪಾತ್ರವಹಿಸಿವೆ. ಚಂದ್ರಯಾನದ ಒಟ್ಟು ತೂಕ 3.8 ಟನ್ ಇದೆ. ಚಂದ್ರಯಾನ-2ರಲ್ಲಿ ಒಟ್ಟಾರೆ ಮೂರು ಭಾಗ (ಮಾಡ್ಯೂಲ್)ಗಳಿವೆ. ಕಕ್ಷೆಯಲ್ಲಿ ಸುತ್ತುವ ಆರ್ಬಿಟರ್, ಚಂದ್ರನ ನೆಲವನ್ನು ಮುಟ್ಟುವ ಲ್ಯಾಂಡರ್(ವಿಕ್ರಮ್) ಹಾಗೂ ಸ್ಯಾಂಪಲ್‍ಗಳನ್ನು ಸಂಗ್ರಹಿಸುವ ರೋವರ್(ಪ್ರಜ್ಞಾನ್). ಈ ಮೂರೂ ವಿಭಾಗಗಳನ್ನೂ ಜಿಎಸ್‍ಎಲ್‍ವಿ ಎಂಕೆ-3 ಉಡಾವಣಾ ವಾಹನದಲ್ಲಿ ಕೂರಿಸಿ ಹಾರಿಬಿಡಲಾಗಿತ್ತು. ಲ್ಯಾಂಡರ್ ಒಳಗೆ ರೋವರ್ ನೌಕೆ ಇರಿಸಿ, ಆರ್ಬಿಟರ್​​ಮ ಮೇಲ್ಭಾಗದಲ್ಲಿ ಲ್ಯಾಂಡರ್ ಅಳವಡಿಸಲಾಗುತ್ತದೆ. ಬಾಹ್ಯಾಕಾಶದಿಂದ ಚಂದ್ರನ ಕಕ್ಷೆಗೆ ತೆರಳುವವರೆಗೂ ಒಟ್ಟು 5 ಬಾರಿ ಆರ್ಬಿಟರ್​​​ನಲ್ಲಿ ಎಂಜಿನ್​​ ಆನ್ ಮಾಡಿ ಚಂದ್ರನ ಕಡೆಗೆ ಕಳುಹಿಸಲಾಗುತ್ತದೆ. ಇಸ್ರೋ ಜಗತ್ತಿನ ಇತರ ಬಾಹ್ಯಾಕಾಶ ಸಂಸ್ಥೆಗಳು ಈ ಪ್ರಕ್ರಿಯೆ ಮೇಲೆ ನಿಗಾ ಇರಿಸಿ ಇಸ್ರೋಗೆ ನೆರವು ನೀಡಲಿವೆ.

ABOUT THE AUTHOR

...view details