ಕರ್ನಾಟಕ

karnataka

ETV Bharat / state

ಸಮಬಲದ ಹೋರಾಟ: ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗೆ 'ಲಾಟರಿ'..!

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಸುಂಡಹಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸಮಬಲದ ಹೋರಾಟ ನಡೆಸಿದ್ದರಿಂದ ಲಾಟರಿ ಮೂಲಕ ವಿಜೇತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.

By

Published : Dec 30, 2020, 4:59 PM IST

Selected the winning candidate by lottery
ಲಾಟರಿ ಮೂಲಕ ವಿಜೇತ ಅಭ್ಯರ್ಥಿ ಆಯ್ಕೆ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಸುಂಡಹಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಮನಾಗಿ ಮತಗಳು ಬಂದಿದ್ದರಿಂದ ಲಾಟರಿ ಮೂಲಕ ಚುನಾಯಿತ ಅಭ್ಯರ್ಥಿ ಆಯ್ಕೆ ಮಾಡಲಾಯಿತು.

ಲಾಟರಿ ಮೂಲಕ ವಿಜೇತ ಅಭ್ಯರ್ಥಿ ಆಯ್ಕೆ

ಸುಂಡಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಸಾಣೇನಹಳ್ಳಿ ಕ್ಷೇತ್ರದಿಂದ ವಿಜಯಮ್ಮ ಮತ್ತು ಸುಮಾ ರಮೇಶ್ ಪರಸ್ಪರ ಎರುರಾಳಿಯಾಗಿ ಸ್ಪರ್ಧೆ ಮಾಡಿದ್ದರು. ಮತ ಎಣಿಕೆ ವೇಳೆ ಇಬ್ಬರು ತಲಾ 353 ಮತ ಸಮನಾಗಿ ಪಡೆದಿದ್ದರಿಂದ ಚುನಾವಣಾಧಿಕಾರಿಗಳು ಇಬ್ಬರ ಒಪ್ಪಿಗೆ ಪಡೆದು ಲಾಟರಿ ಎತ್ತಿದರು. ಲಾಟರಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮಾ ಸುರೇಶ್ ಗೆಲುವು ಸಾಧಿಸಿದ್ದಾರೆ.

ಇಬ್ಬರು ಅಭ್ಯರ್ಥಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಡಬ್ಬದಲ್ಲಿ ಹಾಕಿ ಲಾಟರಿ ಮೂಲಕ ತಹಶೀಲ್ದಾರ್ ಮಾರುತಿ ಆಯ್ಕೆ ಮಾಡಿದ್ದಾರೆ. ಕೊನೆಗೆ ಸುಮಾ ಗೆದ್ದು, ವಿಜಯಮ್ಮ ಸೋಲೊಪ್ಪಿಕೊಂಡಿದ್ದಾರೆ.

ABOUT THE AUTHOR

...view details