ಕರ್ನಾಟಕ

karnataka

ETV Bharat / state

ದುರಸ್ತಿ ಕಾಣದ ರಸ್ತೆ:ಯಾಮಾರಿದ್ರೆ ಸೀದಾ ಯಮನ ಪಾದ

ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದೆಗೆಟ್ಟಿದ್ದು ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜೊತೆಗೆ ವಾಹನ ಸವಾರರು ಪರದಾಡುವಂತಾಗಿದೆ.

By

Published : Jun 15, 2019, 8:31 AM IST

ದುರಸ್ತಿ ಕಾಣದ ರಸ್ತೆ

ಹಾಸನ:ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದೆಗೆಟ್ಟಿದ್ದು, ಸಾರ್ವಜನಿಕರು ಓಡಾಡೋದೇ ದುಸ್ತರವಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವವರಿಗೆ ಧೂಳಿನ ಸ್ನಾನವಾಗುತ್ತಿದ್ದು ಪ್ರಯಾಣಿಕರು ಮತ್ತು ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ದುರಸ್ತಿ ಕಾಣದ ರಸ್ತೆ

ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ರಸ್ತೆ ಕಾಮಗಾರಿಯನ್ನು ಕಳೆದ ವರ್ಷವೇ ಲೋಕೋಪಯೋಗಿ ಇಲಾಖೆ ಪ್ರಾರಂಭ ಮಾಡಿತ್ತು. ಆದರೆ ವರ್ಷ ಕಳೆದರೂ ಕೂಡ ಕಾಮಗಾರಿ ಮುಗಿಸದಿರುವುದು ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದೆ.ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಅಗೆದು ಸುಮಾರು ಎಂಟು- ಹತ್ತು ತಿಂಗಳುಗಳೇ ಕಳೆದಿದ್ದರು ದುರಸ್ತಿ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ನಗರದ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ಸಾಲಗಾಮೆ ಗೇಟ್ ನಿಂದ ಹಿಡಿದು ಬಾಹ್ಯಾಕಾಶ ನಿಯಂತ್ರಣ ಕೇಂದ್ರವಾದ ಎಂಸಿಎಫ್ ವರೆಗೆ ಸುಮಾರು ಆರು ಕಿಲೋಮೀಟರ್ ನಷ್ಟು ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಎಂಟತ್ತು ತಿಂಗಳ ಹಿಂದೆಯೇ ಅಗೆಯಲಾಗಿದೆ. ಇದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ವ್ಯಾಪಾರಸ್ಥರು ವ್ಯಾಪಾರವು ಇಲ್ಲದೆ ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.

ರಸ್ತೆ ಅಗೆದಿರುವ ಕಾರಣ ಧೂಳು ಹೆಚ್ಚಾಗಿದ್ದು ಇಲ್ಲಿನ ವ್ಯಾಪಾರಸ್ಥರು ನಿತ್ಯ ದೂಳಿನ ಸ್ನಾನ ಮಾಡುತ್ತಿದ್ದಾರೆ. ವ್ಯಾಪಾರ ನಷ್ಟದ ಜೊತೆಗೆ ಉಸಿರಾಟದ ಸಮಸ್ಯೆಯನ್ನು ಕೂಡ ಎದುರಿಸಬೇಕಾಗಿದೆ.ಅಲ್ಲದೆ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಿದ್ದು ವಾಹನಗಳ ಅಪಘಾತ ಸರ್ವೆ ಸಾಮಾನ್ಯವಾಗಿದೆ. ಸಂಬಂಧ ಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಕಡೆ ಗಮನಹರಿಸಿ ನೆನಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡುತ್ತಾರಾ...? ಕಾದುನೋಡಬೇಕಿದೆ....

ABOUT THE AUTHOR

...view details