ಹಾಸನ:ಅಲ್ಟ್ರಾ ಲ್ಯಾಬೊರೇಟರೀಸ್ ಪ್ರೈ.ಲಿ ಎಂಬ ಮೆಡಿಸನ್ ಕಂಪನಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದ 15 ಜನ ಕೆಲಸಗಾರರು ತೆಗೆದು ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.
ಜಿಲ್ಲಾಧಿಕಾರಿ ಕಛೇರಿ ಮುಂದೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ನಾವು ಕೆಲಸ ನಿರ್ವಹಿಸುವ ಕಂಪನಿಯಲ್ಲಿ ದಾಖಲಾತಿ ಪ್ರಕಾರ, ಕೆಲಸ ಮಾಡುವವರಿಗೆ ಖಾತರಿ ಪತ್ರ ನೀಡಿರುವ ಸವಲತ್ತುಗಳನ್ನು ನೀಡಿ ಎಂದು ಕೇಳಿದಕ್ಕೆ ಮತ್ತು ಯೂನಿಯನ್ ನಿರ್ಮಿಸಿದಕ್ಕೆ, ಯಾವುದೇ ನೋಟಿಸ್ ಆಗಾಲಿ, ಕಾರಣವಾಗಲಿ ನೀಡದೇ ಏಕ ಏಕಿ ಪ್ಯಾಕ್ಟರಿ ಗೇಟ್‌ಗೆ ಕೆಲಸದಿಂದ ತೆಗೆದು ಹಾಕಲಾಗಿರುವ 15 ಕಾರ್ಮಿಕರ ಹೆಸರಿನ ಪಟ್ಟಿ ಅಂಟಿಸಿ ಕೆಲಸದಿಂದ ತೆಗೆದಿರುವುದ ಕುರಿತು ಪ್ರತಿಭಟನೆ ಮಾಡಿದರು.
ಈ ಕುರಿರು ಮಾತಾಡಿದ ಕಾರ್ಮಿಕ ಧನಪಾಲ್, ಕನ್ನಡಿಗರನ್ನು ಹೊರಗೆ ಹಾಕಿ ಅಸ್ಸಾಂ, ಕೇರಳ ಜನರನ್ನು ಕಾರಿನಲ್ಲಿ ಕರೆತಂದು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಸಂವಿಧಾನವಾಗಿರುವ ಕಾನೂನನ್ನು ಸುಟ್ಟಾಕಲು ಹೊರಟಿದ್ದಾರೆ. ಈ ಕಂಪನಿಯ ಮಾಲೀಕರು ಒಳ್ಳೆಯವರು, ಆದರೆ ನಿರ್ವಹಣೆ ಮಾಡುತ್ತಿರುವ ಹೆಚ್.ಆರ್. ವಿಭಾಗದ ಸುರೇಶ್‌ರವರ ದಬ್ಬಾಳಿಕೆಗೆ ಕನ್ನಡಿಗರು ಕೆಲಸ ಕಳೆದುಕೊಳ್ಳಬೇಕಾಗಿದೆ. ಈ ಕೆಲಸ ನಂಬಿ ಕುಟುಂಬ ನಿರ್ವಹಣೆ ಮಾಡಲಾಗುತ್ತಿದೆ. ಈಗ ಕೆಲಸ ಇಲ್ಲದೇ ಇರುವುದರಿಂದ ಜೀವನ ನಡೆಸುವುದು ಹೇಗೆ ಎಂದು ಪ್ರಶ್ನೆ ಮಾಡಿದರು.
ನಾವು ಅಲ್ಟ್ರಾ ಯೂನಿಯನ್ ಸಂಘ ನಿರ್ಮಿಸಿದ ಇಂದೇ ಉದ್ದೇಶದಿಂದ 15 ಜನ ಕನ್ನಡಿಗ ಕೆಲಸಗಾರರನ್ನು ಹೊರ ಹಾಕಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಸರಿಪಡಿಸಿ ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.