ಕರ್ನಾಟಕ

karnataka

ETV Bharat / state

ರಾಜಕೀಯ ಪ್ರತಿಷ್ಠೆಯ ಕಣವಾದ ಬಸ್​ ವಿಷಯ: ಸಂಚಾರಕ್ಕೆ ಬ್ರೇಕ್ ಹಾಕಿದರೇ ಶಾಸಕ?

ಎರಡು ದಿನಗಳ ಕಾಲ ಸಂಚಾರ ಮಾಡಿದ್ದ ಬಸ್ ಸಂಸ್ಥೆಗೆ ಉತ್ತಮ ಆದಾಯ ಕೂಡಾ ತಂದಿತ್ತು. ಆದ್ರೆ ಸಂಚಾರ ಮಾಡಿದ ಎರಡೇ ದಿನದಲ್ಲಿ ಬಸ್ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇದಕ್ಕೆ ಕಾರಣ ಇಲ್ಲಿ ಸ್ಥಳೀಯ ಶಾಸಕರು ಅಂತಾರೆ ಸಾರ್ವಜನಿಕರು.

By

Published : Apr 21, 2022, 8:19 PM IST

ರಾಜಕೀಯ ಪ್ರತಿಷ್ಠೆಯ ಕಣವಾದ ಬಸ್​ ವಿಷಯ
ರಾಜಕೀಯ ಪ್ರತಿಷ್ಠೆಯ ಕಣವಾದ ಬಸ್​ ವಿಷಯ

ಹಾಸನ: ರಸ್ತೆ ರಾಷ್ಟ್ರೀಕರಣವಾದ ನಂತರ ಪ್ರತಿ ಗ್ರಾಮಕ್ಕೂ ಬಸ್ ಸಂಚಾರದ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕೆಲಸ. ಹಾಗಾಗಿ ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಇಲ್ಲಿನ ಗ್ರಾಮಗಳಿಗೆ ದಶಕಗಳ ನಂತ್ರ ಬಸ್ ಬಿಡಲಾಗಿತ್ತು. ಆದ್ರೆ, ಬಸ್ ಸಂಚಾರ ಮಾಡುವಲ್ಲಿಯೂ ರಾಜಕೀಯ ರೂಪ ಪಡೆದು ಸಂಚಾರ ಮೊಟಕುಗೊಂಡಿದೆ.

ಹಾಸನ ವಿಭಾಗದ ಚನ್ನರಾಯಪಟ್ಟಣದಿಂದ ಗೊಮ್ಮಟೇಶ್ವರನ ನಗರಿ ಶ್ರವಣಬೆಳಗೂಳ, ಪರಮ, ದಿಡಗ, ಊಳಿಗೆರೆ, ಬೂಕ ಮಾರ್ಗವಾಗಿ ಹಿರೀಸಾವೆ ತಲುಪಲು ಕಳೆದ ಮೂರು ದಿನಗಳ ಹಿಂದೆ ಗ್ರಾಮಸ್ಥರ ಮನವಿ ಮೇರೆಗೆ ಪರಮ ಗ್ರಾಮದಿಂದ ಬಸ್​​ಗೆ ಪೂಜೆ ಸಲ್ಲಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಎರಡು ದಿನಗಳ ಕಾಲ ಸಂಚಾರ ಮಾಡಿದ್ದ ಬಸ್ ಸಂಸ್ಥೆಗೆ ಉತ್ತಮ ಆದಾಯವನ್ನು ಕೂಡಾ ತಂದಿತ್ತು. ಆದ್ರೆ ಸಂಚಾರ ಮಾಡಿದ ಎರಡೇ ದಿನದಲ್ಲಿ ಮುಕ್ತಾಯ ಕಂಡಿದೆ.

ಇದನ್ನೂ ಓದಿ: ಭಾರತದ ಜೊತೆ £1 ಬಿಲಿಯನ್ ಹೂಡಿಕೆ ಒಪ್ಪಂದ ಘೋಷಿಸಿದ ಬ್ರಿಟನ್‌ ಪ್ರಧಾನಿ!

ABOUT THE AUTHOR

...view details