ಕರ್ನಾಟಕ

karnataka

ETV Bharat / state

ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮಟ್ಟದಲ್ಲಿ ದೇಣಿಗೆ ಸಂಗ್ರಹವಾಗಿಲ್ಲ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ - Sri Vishva Prasanna Theertha Swamiji Statement

ಕೊರೊನಾ ಸೋಂಕು ಹೆಚ್ಚಾಗಿರುವುದು ರಾಮ ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ದೇಣಿಗೆ ದೊಡ್ಡ ಮಟ್ಟದಲ್ಲಿ ಸಂಗ್ರಹವಾಗಿಲ್ಲ ಎಂದು ಆಯೋಧ್ಯೆ ರಾಮ ಮಂದಿರ ಟ್ರಸ್ಟ್ ನಿರ್ದೇಶಕ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

Sri Vishva Prasanna Theertha Swamiji
ಆಯೋಧ್ಯೆ ರಾಮ ಮಂದಿರ ಟ್ರಸ್ಟ್ ನಿರ್ದೇಶಕರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

By

Published : Sep 27, 2020, 11:42 AM IST

ಹಾಸನ: ಎಲ್ಲೆಡೆ ಕೊರೊನಾ ಮಹಾಮಾರಿ ಆವರಿಸಿರುವುದರಿಂದ ರಾಮ ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ದೇಣಿಗೆ ದೊಡ್ಡ ಮಟ್ಟದಲ್ಲಿ ಸಂಗ್ರಹವಾಗಿಲ್ಲ ಎಂದು ಆಯೋಧ್ಯೆ ರಾಮ ಮಂದಿರ ಟ್ರಸ್ಟ್ ನಿರ್ದೇಶಕ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಆಯೋಧ್ಯೆ ರಾಮ ಮಂದಿರ ಟ್ರಸ್ಟ್ ನಿರ್ದೇಶಕ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಗುರುರಾಘವೇಂದ್ರ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಮಜನ್ಮ ಭೂಮಿ ಸ್ಥಳಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರೆ ಬಂದು ಭೂಮಿ ಪೂಜೆ ಮಾಡಿ ಹೋಗಿದ್ದಾರೆ. ಕಾಮಗಾರಿ ಕಾರ್ಯ ಮುಂದುವರೆದಿದ್ದು, ಕೊರೊನಾ ಸೋಂಕು ಅಧಿಕವಾಗಿರುವುದರಿಂದ ನಾವುಗಳು ಈ ಭಾಗಕ್ಕೆ ಹೋಗುತ್ತಿಲ್ಲ. ಸೋಂಕು ತಗ್ಗಿದ ಮೇಲೆ ಮತ್ತೆ ಪ್ರಯಾಣ ಬೆಳೆಸಲಾಗುವುದು ಎಂದರು.

ಮುಂದಿನ ಪ್ರಬೋಧಿನಿ ಏಕದಶಿಗೊಂಡು ಒಂದು ತಿಂಗಳ ತನಕ ವಿಶೇಷವಾದ ಆಂದೋಲನವನ್ನು ಮಾಡಬೇಕು. ಮಂದಿರದ ನಿರ್ಮಾಣಕ್ಕೆ ಬೇಕಾಗಿರುವ ದೇಣಿಗೆ ಸಂಗ್ರಹ ಈ ಮೂಲಕ ನಡೆಯುವ ವಿಚಾರ ಇದೆ. ಆದರೆ ಕೋವಿಡ್​ ಪ್ರಭಾವ ಇನ್ನು ತಗ್ಗಿಲ್ಲದ ಕಾರಣ ಇದು ಸಹ ಮುಂದೆ ಹೋಗಲಿದೆ. ಎಲ್ಲಾರ ಸಹಕಾರದಲ್ಲಿ ಉತ್ತಮವಾಗಿ ಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಂದೋಲನದ ಮೂಲಕ ಆಗಬೇಕಿದ್ದ ದೇಣಿಗೆಯು ದೊಡ್ಡ ಮಟ್ಟದಲ್ಲಿ ಸಂಗ್ರಹ ಕಾರ್ಯ ನಡೆದಿರುವುದಿಲ್ಲ. ವೈಯಕ್ತಿಕವಾಗಿ ಯಾರ್ಯಾರು ದೇಣಿಗೆ ಬಂದು ನೀಡುತ್ತಿದ್ದಾರೋ ಅಷ್ಟು ಮಾತ್ರ ಸಂಗ್ರಹವಾಗಿದೆ. ದೇಣಿಗೆಗಾಗಿ ಬ್ಯಾಂಕಿನಲ್ಲಿ ಖಾತೆ ತೆರೆದು ನೇರವಾಗಿ ಮಂದಿರ ಕೆಲಸಕ್ಕೆ ಜಮವಾಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ. ಟ್ರಸ್ಟ್ ಒಂದು ಕಡೆಯಾದರೇ, ಮಂದಿರ ನಿರ್ಮಾಣಕ್ಕಾಗಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿ ಅದಕ್ಕೆ ಎಲ್ಲಾ ಜವಾಬ್ದಾರಿಯನ್ನು ಕೊಡಲಾಗುತ್ತದೆ. ನಂತರದಲ್ಲಿ ಆ ಜಾಗದಲ್ಲಿ ಬೃಂದಾವನದ ಕಾರ್ಯ ಪ್ರಾರಂಭವಾಗುತ್ತದೆ ಎಂದರು.

ಇನ್ನು ತಮ್ಮ ಕಂಠದ ಮೂಲಕ ಎಲ್ಲರ ಮನಗೆದ್ದಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಈ ಲೋಕವನ್ನು ತ್ಯಜಿಸಿದ್ದಾರೆ. ಅವರ ಅಗಲಿಕೆಯಿಂದ ಕಲಾ ರಂಗದಲ್ಲೇ ದೊಡ್ಡದೊಂದು ಕೊರತೆ ಮತ್ತು ನೋವು ಎದ್ದು ಕಾಣುತ್ತಿದೆ. ಶ್ರೀಕೃಷ್ಣ ಪರಮಾತ್ಮ ಅವರಿಗೆ ವಿಶೇಷವಾದ ಸದ್ಗತಿಗಳನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದ ಮೂಲಕ ಅವರು ಮನೆ ಮಾತಾಗಿ ಹೋಗಿದ್ದಾರೆ. ಅದರಲ್ಲೂ ಸಣ್ಣ ಮಕ್ಕಳ ಹೃದಯವನ್ನು ಗೆದ್ದಿದ್ದಾರೆ. ಒಬ್ಬ ಬಾಲಸುಬ್ರಮಣ್ಯಂ ಅವರು ಈ ಜಗತ್ತಿನಿಂದ ಕಣ್ಮರೆ ಆದರೂ ಕೂಡ ಅಂತಹ ಸಾವಿರಾರು ಮಂದಿ ವ್ಯಕ್ತಿಗಳು ಹುಟ್ಟಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಇನ್ನು ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಅವರು ಕೂಡ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಅವರು ಗುರುಗಳ ವಿಶೇಷವಾದ ಶಿಷ್ಯರಾಗಿ ಸೇವೆ ಮಾಡಿದ್ದು, ಅವರಿಗೆ ದೇವರು ಶಾಂತಿ ಕರುಣಿಸಲಿ ಎಂದರು.

ಇಂದು ಲೋಕದೆಲ್ಲೆಡೆ ಕೋವಿಡ್ ಪ್ರಭಾವವು ಇನ್ನೂ ತಳಮಟ್ಟದಲ್ಲಿ ಹರಡುತ್ತಿದೆ. ಅದಕ್ಕಾಗಿ ಎಲ್ಲರು ಜಾಗೃತಿ ವಹಿಸಬೇಕು. ಆದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೆಚ್ಚು ಪಸರಿಸದಂತೆ ಬಹು ಬೇಗನೇ ಅದು ಗುಣಮುಖರಾಗುವುದಕ್ಕೆ ಪ್ರತಿಯೊಬ್ಬರು ಮುತುವರ್ಜಿವಹಿಸಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details