ಹಾಸನ: ಗಾಂಧಿ ಜಯಂತಿ ಅಂಗವಾಗಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಕಸ ವಿಲೇವಾರಿ ಮಾಡುವ ಮೂಲಕ ಗಮನ ಸೆಳೆದರು.
ಗಾಂಧಿ ಜಯಂತಿ ಪ್ರಯುಕ್ತ ರಸ್ತೆ ಮೇಲೆ ಸ್ವಚ್ಛತಾ ಕಾರ್ಯ ಮಾಡಿದ ಶಾಸಕ ಲಿಂಗೇಶ್ - Gandhi jayanti by cleaning road in Hassan
ಗಾಂಧಿ ಜಯಂತಿ ಅಂಗವಾಗಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಕಸ ವಿಲೇವಾರಿ ಮಾಡುವ ಮೂಲಕ ಗಮನ ಸೆಳೆದರು.
ಗಾಂಧಿ ಜಯಂತಿ ಆಚರಣೆ ಬಳಿಕ ನಗರದ ಕೆಲವೆಡೆ ರಸ್ತೆಯಲ್ಲಿದ್ದ ಕಸದ ರಾಶಿಯನ್ನ ಕಂಡು ಸ್ವತಃ ಗುದ್ದಲಿ ಹಿಡಿದು ಕಸವನ್ನು ವಾಹನಕ್ಕೆ ತುಂಬಿದರು. ಶಾಸಕರು ಕಸವನ್ನ ತೆಗೆಯುತ್ತಿದ್ದಂತೆ ಅವರೊಂದಿಗಿದ್ದ ಕಾರ್ಯಕರ್ತರು ಮತ್ತು ಅನುಯಾಯಿಗಳು ಸ್ವಯಂ ಪ್ರೇರಿತವಾಗಿ ರಸ್ತೆಯನ್ನ ಸಂಪೂರ್ಣ ಸ್ವಚ್ಛಗೊಳಿಸಿದರು.
ವಿಶ್ವದ ಮನ್ನಣೆ ಗಳಿಸಿರುವ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶಗಳನ್ನ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ವಿಷಕಾರಿ ವಸ್ತು. ಅದರ ವಿಲೇವಾರಿ ಬಹಳ ಕಠಿಣ. ಇದು ಪರಿಸರಕ್ಕೆ ಮಾತ್ರವಲ್ಲದೇ ಪಶು-ಪಕ್ಷಿ, ಜಾನುವಾರುಗಳ ಜೀವಕ್ಕೂ ಮಾರಕವಾಗಿದೆ. ಈ ಹಿನ್ನೆಲೆ ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ಅಂಗವಾಗಿ ರಾಷ್ಟ್ರವ್ಯಾಪಿ ಪ್ಲಾಸ್ಟಿಕ್ ನಿಷೇಧ ಜಾರಿಯಾಗಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.