ಹಾಸನ : ಈಟಿವಿ ಭಾರತ್ನಿಂದ ಸುದ್ದಿ ತಿಳಿದು ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದಲ್ಲಿರುವ ಕ್ರಷರ್ ಘಟಕದಲ್ಲಿ ಕೆಲಸ ಮಾಡುತ್ತಿರುವ ಅಂತರರಾಜ್ಯ ಕಾರ್ಮಿಕರು ಹಾಗೂ ಅಂತರ ಜಿಲ್ಲಾ ಕಾರ್ಮಿಕರಿಗೆ ಶಾಸಕ ಕೆ.ಎಸ್.ಲಿಂಗೇಶ್ ಆಹಾರ ಪದಾರ್ಥಗಳ ಕಿಟ್ಗಳನ್ನ ವಿತರಿಸಿದ್ದಾರೆ.
ಕ್ರಷರ್ ಘಟಕದ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಶಾಸಕ...
ಲಾಕ್ಡೌನ್ ನಡುವೆ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದ ಕ್ರಷರ್ ಘಟಕದಲ್ಲಿ ಕೆಲಸ ಮಾಡುತ್ತಿರುವ ಅಂತರರಾಜ್ಯ ಕಾರ್ಮಿಕರು ಹಾಗೂ ಅಂತರ ಜಿಲ್ಲಾ ಕಾರ್ಮಿಕರಿಗೆ ಶಾಸಕ ಕೆ.ಎಸ್.ಲಿಂಗೇಶ್ ಆಹಾರ ಪದಾರ್ಥಗಳ ಕಿಟ್ಗಳನ್ನ ವಿತರಿಸಿದರು.
ಈ ಘಟಕದಲ್ಲಿ ಮಾಲಿಕರಾಗಲೀ, ಅಲ್ಲಿನ ಮೇಲ್ವಿಚಾರಕರಾಗಲಿ ಯಾರೂ ಇಲ್ಲದ ಕಾರಣ ಊಟಕ್ಕೆ ಸಮಸ್ಯೆ ಇದೆ ಎಂದು ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್ ಅವರೊಂದಿಗೆ ಆಗಮಿಸಿ ಆಹಾರ ಪದಾರ್ಥಗಳು ಹಾಗೂ ಮುಖ ಗವಸುಗಳನ್ನು ನೀಡಿ ಆಹಾರಕ್ಕೆ ಸಮಸ್ಯೆ ಆಯಿತು ಎಂದು ಯಾರೂ ಕದ್ದು ಹೋಗಬಾರದು, ಒಂದು ವೇಳೆ ಕದ್ದು ಹೋದಲ್ಲಿ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದಿದ್ದಾರೆ.
ನಂತರ ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ವಾರಕ್ಕೊಮ್ಮೆ ಆಹಾರ ಪದಾರ್ಥಗಳನ್ನು ಕೊಡಲಾಗುವುದು. ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ತುರ್ತು ಸಂಖ್ಯೆ 104/108ಕ್ಕೆ ಕರೆ ಮಾಡಿ ಎಂದರು.ಕಾರ್ಮಿಕ ನಿರೀಕ್ಷಕ ಪ್ರಭಾಕರ್, ರಾಜಸ್ವ ನಿರೀಕ್ಷಕ ರವಿ, ಪಿಡಿಓ ರಮ್ಯಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಯ್ಯ ಇದ್ದರು.
TAGGED:
ಶಾಸಕ ಕೆ.ಎಸ್.ಲಿಂಗೇಶ್