ಚನ್ನರಾಯಪಟ್ಟಣ:ಕುಡಿದುಹಣದ ವಿಚಾರವಾಗಿ ಜಗಳವಾಡಿದ ಸ್ನೇಹಿತರು ಕೊಲೆಯಲ್ಲಿ ಅಂತ್ಯವಾದ ಘಟನೆ ಪಟ್ಟಣದ ವೆಂಕಟೇಶ್ವರ ಲೇಔಟ್ನಲ್ಲಿ ನಡೆದಿದೆ.
ತಮಿಳುನಾಡು ಮೂಲದ ರಾಜೇಂದ್ರನ್ ಕೊಲೆ ಆಗಿದ್ದು, ಸಂತೋಷ್ ಎಂಬು ಆರೋಪಿ ಕೊಲೆ ಮಾಡಿದವು. ರಾಜೇಂದ್ರನ್ ಸುಮಾರು ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದರು. ಬಳಿಕ ಬಿಹಾರದ ಸಂತೋಷ್ ಪರಿಚಯವಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ತನಿಖೆ ನಡೆಸುತ್ತಿರುವ ಪೊಲೀಸರು ಇತ್ತೀಚೆಗೆ ವೆಂಕಟೇಶ್ವರ ಬಡಾವಣೆಯಲ್ಲಿ ಒಂದು ಮನೆಗೆ ಬಣ್ಣ ಬಳಿಯಲು ಬಂದಿದ್ದರು. ಬೆಳಗ್ಗೆ ಕೆಲಸ ಮಾಡಿ ರಾತ್ರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಹಣದ ವಿಚಾರವಾಗಿ ಜಗಳವಾಗಿದೆ. ಇದೇ ದ್ವೇಷ ಬೆಳಸಿಕೊಂಡ ಸಂತೋಷ್ ಅವರು ರಾಜೇಂದ್ರನ್ ಮಲಗಿದ್ದಾಗ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಆರೋಪಿ ಸಂತೋಷ್ನನ್ನು ಪೊಲೀಸರು ಬಂದಿಸಿ ತಿನಿಖೆ ನಡೆಸುತ್ತಿದ್ದಾರೆ.