ಕರ್ನಾಟಕ

karnataka

ನ. 5ರಂದು ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುವುದು: ತಹಶೀಲ್ದಾರ್​​

ನವೆಂಬರ್ 5ರಿಂದ 16ರವರಗೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುತ್ತಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ತಹಶೀಲ್ದಾರ್​ ಶಿವಶಂಕರಪ್ಪ ತಿಳಿಸಿದ್ದಾರೆ.

By

Published : Nov 2, 2020, 5:48 PM IST

Published : Nov 2, 2020, 5:48 PM IST

Updated : Nov 2, 2020, 6:01 PM IST

Hassanambe temple doors open on November 5: Tahsildar Sivasankarappa
ನವೆಂಬರ್ 5ರಂದು ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುವುದು: ತಹಶೀಲ್ದಾರ್​ ಶಿವಶಂಕರಪ್ಪ

ಹಾಸನ: ಹಾಸನಾಂಬೆ ದೇವಾಲಯದ ಬಾಗಿಲು ಇದೇ ತಿಂಗಳ 5ರಂದು ಮಧ್ಯಾಹ್ನ ತೆರೆಯಲಿದೆ ಎಂದು ತಹಶೀಲ್ದಾರ್​ ಶಿವಶಂಕರಪ್ಪ ತಿಳಿಸಿದ್ದಾರೆ.

ನ. 5ರಂದು ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುವುದು: ತಹಶೀಲ್ದಾರ್​​

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇಂದು ಸಾಂಪ್ರದಾಯಿಕವಾಗಿ ದೇವಿಯ ಒಡವೆಗಳನ್ನು ಅರ್ಚಕರಿಗೆ ಹಸ್ತಾಂತರಿಸಿ ಪೂಜೆ ಸಲ್ಲಿಸಲಾಗಿದೆ. ನವೆಂಬರ್ 5ರಿಂದ 16ರವರಗೆ ದೇವಿಯ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಕೋವಿಡ್ ಹಿನ್ನೆಲೆ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಮೊದಲ ಹಾಗೂ ಕೊನೆಯ ದಿನ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ ಮಾಡಿಕೊಡಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಸಾರ್ವಜನಿಕರಿಗೆ ಎಲ್‌ಇಡಿ ಪರದೆ ಮೂಲಕ ನಗರದ ಪ್ರಮುಖ ವೃತ್ತಗಳಲ್ಲಿ ದರ್ಶನದ ಅವಕಾಶ ನೀಡಲಾಗುವುದು ಎಂದು‌ ತಿಳಿಸಿದರು.

Last Updated : Nov 2, 2020, 6:01 PM IST

ABOUT THE AUTHOR

...view details