ಕರ್ನಾಟಕ

karnataka

ETV Bharat / state

ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ: ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಡಿಸಿ ಸೂಚನೆ

ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದ್ದು, ಗಣತಿಗೆ ಸಹಕರಿಸಬೇಕೆಂದು ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

By

Published : Jan 3, 2020, 10:15 AM IST

pressmeet
ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ

ಹಾಸನ : ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದ್ದು, ಗಣತಿಗೆ ಸಹಕರಿಸಬೇಕೆಂದು ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ 7ನೇ ಆರ್ಥಿಕ ಗಣತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ್ರು. ರೈತರು, ಸಾರ್ವಜನಿಕರು, ವ್ಯಾಪಾರಿಗಳು, ಉದ್ಯಮದಾರರು ತಮ್ಮ ಆರ್ಥಿಕ ಚಟುವಟಿಕೆಗಳ ಕುರಿತ ಮಾಹಿತಿಯನ್ನು ನೀಡಿ ಗಣತಿಗೆ ಸಹಕರಿಸಬೇಕೆಂದು ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ

7ನೇ ಆರ್ಥಿಕ ಗಣತಿ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ 6ನೇ ಗಣತಿಯ ಮಾಹಿತಿ ಪ್ರಕಾರ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1,12,014, ನಗರ ಪ್ರದೇಶಗಳಲ್ಲಿ 28,962 ಸೇರಿದಂತೆ ಒಟ್ಟು 1,40,976 ಉದ್ಯಮಗಳಿದ್ದು, ಅವುಗಳಲ್ಲಿ ಕೇವಲ 7,000 ಉದ್ಯಮಗಳ ಗಣತಿ ಕಾರ್ಯ ನಡೆದಿದ್ದು, ಮಾರ್ಚ್‌ ಅಂತ್ಯದೊಳಗೆ ನಿಗದಿತ 1.5 ಲಕ್ಷ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕು ಕಚೇರಿಗಳಲ್ಲಿ ಪಿಡಿಒ ಹಾಗೂ ಗ್ರಾಮಲೆಕ್ಕಿಗರಿಗೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಆರ್ಥಿಕ ಗಣತಿಯ ಕುರಿತು ತರಬೇತಿ ಕಾರ್ಯಾಗಾರ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದ್ರು. ಗ್ರಾಮಗಳ ಗಡಿ ಗುರುತುಗಳು ಹಾಗೂ ಕಂದಾಯ ಗ್ರಾಮಗಳಿಗೆ ಹೊಂದಿಕೊಂಡಿರುವ ದಾಖಲೆ ಗ್ರಾಮಗಳ ಬಗ್ಗೆ ಸ್ಥಳೀಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತೆರಿಗೆ ವಸೂಲಿಗಾರರು ಗಣತಿದಾರರಿಗೆ ಸಹಾಯ ಮಾಡಬೇಕೆಂದು ನಿರ್ದೇಶನ ನೀಡಿದರು.

ಬೆಳೆ ಉತ್ಪನ್ನ ಹಾಗೂ ಪ್ಲಾಂಟೇಷನ್ ಬೆಳೆ ಬೆಳೆಯುವವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಮಟ್ಟದ ಸಾರ್ವಜನಿಕ ಆಡಳಿತ ಮಾಡುವ ಎಲ್ಲಾ ಸಚಿವಾಲಯಗಳು ಮತ್ತು ಕಚೇರಿಗಳು, ಕಾನೂನು ಬಾಹಿರವಾಗಿ ನಡೆಸಲಾಗುವ ಜೂಜಾಟ ಇತ್ಯಾದಿಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳಾದ ಯುನೈಟೆಡ್ ನೇಷನ್ ಮತ್ತು ಅವುಗಳ ಏಜೆನ್ಸಿ ಹಾಗೂ ರಾಯಭಾರಿ ಕಚೇರಿ ಇತ್ಯಾದಿಗಳನ್ನು ಹೊರತುಪಡಿಸಿ ಗಣತಿ ಕಾರ್ಯ ನಡೆಯಲಿದೆ ಎಂದು ಹೇಳಿದರು.

ABOUT THE AUTHOR

...view details