ಹಾಸನ :ಫಾರ್ಚುನರ್ ಕಾರು ಕಳ್ಳತನ ಪ್ರಕರಣ ಸಂಬಂಧ ಇದೀಗ ಮತ್ತೋರ್ವ ಪೊಲೀಸ್ ಪೇದೆಯನ್ನ ಅಮಾನತು ಮಾಡಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಧರ್ಮ ಬಿ ಆರ್ ಎಂಬುವರು ಅಮಾನತುಗೊಂಡ ಪೊಲೀಸ್ ಕಾನ್ಸ್‌ಟೇಬಲ್.
ತನಿಖೆ ವೇಳೆ ಪ್ರಮುಖ ಆರೋಪಿ ಮಂಜುನಾಥ್ ನೀಡಿದ ಹೇಳಿಕೆ ಆಧಾರದ ಹಿನ್ನೆಲೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅಮಾನತು ಮಾಡಿ ಆದೇಶ ನೀಡಿದ್ದಾರೆ.
ಜನವರಿ 27ರಂದು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫಾರ್ಚೂನರ್ ಕಾರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು.
ಫೆ.23 ರಂದು ನಗರದ ಎಸ್ಬಿಎಂ ಕಾಲೋನಿಯಲ್ಲಿರುವ ಮಂಜುನಾಥ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಕಾರು ದೊರಕಿತ್ತು. ಅಲ್ಲದೆ ಇದೇ ವೇಳೆ ಮಂಜುನಾಥ್ ಮನೆಯಲ್ಲಿ 3 ಕೋಟಿಗೂ ಅಧಿಕ ಮೌಲ್ಯದ ಶ್ರೀಗಂಧ ಕೂಡ ಪತ್ತೆಯಾಗಿತ್ತು.
ಈ ಪ್ರಕರಣದಲ್ಲಿ ಲಂಚ ಪಡೆದ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸೋಮಶೇಖರ್ ಎಂಬುವರನ್ನು ಈ ಮೊದಲು ಅಮಾನತು ಮಾಡಲಾಗಿತ್ತು. ಆರೋಪಿ ಮಂಜುನಾಥ್ ಸೆರೆಸಿಕ್ಕ ಬಳಿಕ ಆತನ ಹೇಳಿಕೆ ಮೇಲೆ ಈಗ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಧರ್ಮ ಎಂಬಾತನನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ:ಹಾವೇರಿ: ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸ್ಫೋಟಕ ವಸ್ತುಗಳು ಪತ್ತೆ