ಕರ್ನಾಟಕ

karnataka

ETV Bharat / state

ವಾಟ್ಸ್​ಅಪ್ ಸಂದೇಶ ನೋಡಿ ಶತಮಾನದ ಶಾಲೆಗೆ ಸಚಿವ ಸುರೇಶ್​ಕುಮಾರ್​​ ಭೇಟಿ... ಸಮಸ್ಯೆ ಬಗೆಹರಿಸುವ ಭರವಸೆ - ಶತಮಾನದ ಸರ್ಕಾರಿ ಶಾಲೆ

ಶತಮಾನದ ಸರ್ಕಾರಿ ಶಾಲೆಯ ಕಟ್ಟಡ, ಸಮಸ್ಯೆಗೆ ಸಿಲುಕಿದ ಕುರಿತು ವಾಟ್ಸ್​​ಅಪ್ ಸಂದೇಶ ನೋಡಿ ಸಕಲೇಶಪುರ ತಾಲೂಕು ದೇವಾಲಕೆರೆ ಗ್ರಾಮಕ್ಕೆ ಆಗಮಿಸಿದ ಶಿಕ್ಷಣ ಸಚಿವ ಸುರೇಶ್​ಕುಮಾರ್ ಸ್ಥಳೀಯರೊಂದಿಗೆ ಸಭೆ ನಡೆಸಿ ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು.

ಸುರೇಶ್ ಕುಮಾರ್​​
ಸುರೇಶ್ ಕುಮಾರ್​​

By

Published : May 23, 2020, 4:08 PM IST

ಸಕಲೇಶಪುರ:ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಎಸ್ಎಸ್​ಲ್​ಸಿ ಪರೀಕ್ಷೆಯನ್ನು ಅತ್ಯಂತ ಕಾಳಜಿಯಿಂದ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಕಲೇಶಪುರ ತಾಲೂಕಿನ ದೇವಾಲಕೆರೆ ಶಾಲೆ ಕಟ್ಟಡದ ಸಮಸ್ಯೆಯನ್ನು ಗಮನಿಸಲಾಗಿದೆ. ಶಿಕ್ಷಣದ ಏಳಿಗೆಗೆ ನೂರು ವರ್ಷಗಳ ಹಿಂದೆಯೇ ದಾನವಾಗಿ ಪಡೆದ ಜಮಿನಿನ ಬಗ್ಗೆ ಇರುವ ತಕರಾರಾನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ವಾಟ್ಸಅಪ್ ಸಂದೇಶ ಗಮನಿಸಿ ತಾವು ಇಲ್ಲಿಗೆ ಆಗಮಿಸಿದ್ದಾಗಿ ಸಚಿವರು ಹೇಳಿದರು.

ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳ ಜಾಗಗಳನ್ನು ಗುರುತಿಸಿ ಹಕ್ಕುಪತ್ರ ಮಾಡಲು ಕಂದಾಯ ಇಲಾಖೆಗೆ ಆದೇಶ ಮಾಡಲಾಗುತ್ತದೆ ಎಂದರು.

ಶತಮಾನದ ಶಾಲೆಗೆ ಭೇಟಿ ನೀಡಿದ್ದ ಸಚಿವರು ​

ಕೋವಿಡ್19 ಹಿನ್ನಲೆ ಸುಮಾರು ಎರಡು ತಿಂಗಳ ಲಾಕ್​ಡೌನ್ ನಂತರ ಎಸ್ಎಸ್ಎಲ್​ಸಿ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಇರುವ ಊರುಗಳ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪರೀಕ್ಷೆ ಬರೆಯಲಿರುವ ಎಲ್ಲಾ ‌8.5ಲಕ್ಷ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ‌ಸಂಸ್ಥೆ ವತಿಯಿಂದ ತಲಾ ಎರಡು ಮಾಸ್ಕ್ ನೀಡಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಕಿ ಜಾಗೃತಿ ಮೂಡಿಸುವ ಕಾರ್ಯವನ್ನು ಈ‌ ಸಂಸ್ಥೆಯ ವತಿಯಿಂದ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಎಸ್ಎಸ್​ಲ್​ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೋಡಿ ಕೆಸ್.ಎಸ್‌.ಆರ್.ಟಿ.ಸಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ಸಾರಿಗೆ ಸಚಿವರಲ್ಲಿ ಮನವಿ ಮಾಡಲಾಗುವುದು. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು ಎಂದರು.

ABOUT THE AUTHOR

...view details