ಕರ್ನಾಟಕ

karnataka

ETV Bharat / state

ದುಬಾರಿ ನಾಯಿಗಳನ್ನು ಕದ್ದು ವಾಟ್ಸಪ್​ ಮೂಲಕ ತಗಾಲಾಕ್ಕೊಂಡ ಕಳ್ಳರು..! - hassan crime news

ಜೂನ್​ 18ರ ರಾತ್ರಿ ಒಂದೂವರೆ ಲಕ್ಷ ರೂ. ಮೌಲ್ಯದ ನಾಲ್ಕು ನಾಯಿಗಳಾದ ರಾಟ್ ವೀಲರ್, ಲ್ಯಾಬ್ರಡಾರ್, ಡ್ಯಾಶೌಂಡ್ ಮತ್ತು ಗೋಲ್ಡನ್ ರಿಟ್ರೈವರ್ ಎತ್ತೊಯ್ದಿದ್ದರನ್ನು ಪೊಲೀಸರು ಬಂಧಿಸಿದ್ದಾರೆ.

dogs-thives-arrested-in-hassan
ದುಬಾರಿ ನಾಯಿಗಳನ್ನು ಕದ್ದು ವಾಟ್ಸಪ್​ ಮೂಲಕ ತಗಾಲಾಕ್ಕೊಂಡ ಕಳ್ಳರು

By

Published : Jun 29, 2021, 5:13 AM IST

Updated : Jun 29, 2021, 5:23 AM IST

ಹಾಸನ: ಹಣದ ಆಸೆಗಾಗಿ ನಾಯಿಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳು ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹಾಸನ ಹೊರವಲಯದ ಹೊನ್ನೇನಹಳ್ಳಿ ರಸ್ತೆಯಲ್ಲಿರುವ GRR ಕೆನಲ್ಸ್ ನಾಯಿ ಫಾರಂನಿಂದ ದುಬಾರಿ ಬೆಲೆಯ ನಾಯಿಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದು, ಕಳ್ಳರ ಪತ್ತೆಗೆ ವಾಟ್ಸಪ್​​ ಗ್ರೂಪ್ ಸಹಕರಿಸಿದೆ.

ಹಾಸನದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ದಿವಾಕರ್ ಎಂಬುವರಿಗೆ ಸೇರಿದ GRR ಕೆನಲ್ಸ್ ನಾಯಿ ಫಾರಂನಲ್ಲಿ ಜೂನ್​ 18ರ ರಾತ್ರಿ ಒಂದೂವರೆ ಲಕ್ಷ ರೂ. ಮೌಲ್ಯದ ನಾಲ್ಕು ನಾಯಿಗಳಾದ ರಾಟ್ ವೀಲರ್, ಲ್ಯಾಬ್ರಡಾರ್, ಡ್ಯಾಶೌಂಡ್ ಮತ್ತು ಗೋಲ್ಡನ್ ರಿಟ್ರೈವರ್ ಎತ್ತೊಯ್ದಿದ್ದರು. ಇದರ ಜೊತೆಗೆ ಏರ್​ ಪ್ರೆಜರ್ ಮತ್ತು ಕಟಿಂಗ್ ಮಿಷನ್​ಗಳನ್ನೂ ಕಳ್ಳತನ ಮಾಡಲಾಗಿತ್ತು

ದುಬಾರಿ ನಾಯಿಗಳ ಮಾಲೀಕ ದಿವಾಕರ್

ಮಾರನೇ ದಿನ ಬೆಳಗ್ಗೆ ಈ ವಿಷಯ ತಿಳಿದ ಫಾರಂನ ಮಾಲೀಕರು ಬಡಾವಣೆ ಠಾಣೆಗೆ ದೂರು ನೀಡಿದ್ದರು. ನಾಯಿ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಹಾಸನ ಬಡಾವಣೆ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು.

ಈ ನಡುವೆ ಮಾಲೀಕ ದಿವಾಕರ್ ವಾಟ್ಸಪ್ ಮೂಲಕ ಸ್ನೇಹಿತರು ಮತ್ತು ಮಾರಾಟಗಾರರ ಸಂಘದ ಸದಸ್ಯರು ಹಾಗೂ ಗ್ರಾಹಕರ ಗ್ರೂಪ್​ಗಳಿಗೆ ತಾವು ಸಾಕಿದ್ದ ನಾಯಿಗಳು ಕಳುವಾಗಿರುವುದನ್ನು ಫೋಟೋ ಸಮೇತ ಶೇರ್ ಮಾಡಿದ್ದರು.

ಇತ್ತ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ನಾಯಿ ಕದ್ದಿದ್ದ ಚೋರರು, ಅವುಗಳನ್ನು ಮಾರಾಟ ಮಾಡಲು ನಾನಾ ರೀತಿಯ ಕಸರತ್ತು ನಡೆಸಿದ್ದು, ಅವರು ಸಹ ನಾಯಿ ಮಾರಾಟಕ್ಕಿವೆ. ಬೇಕಾದವರು ತಮ್ಮನ್ನು ಸಂಪರ್ಕಿಸಬಹುದು ಎಂದು ವಾಟ್ಸಪ್​ ಗ್ರೂಪ್​​ಗಳಲ್ಲಿ ನಾಯಿಗಳ ಫೋಟೋಗಳನ್ನು ಶೇರ್​​ ಮಾಡಿದ್ದರು. ಒಂದು ನಾಯಿ ಮಾರಾಟವಾಗಿತ್ತು.

ಇದನ್ನು ಗಮನಿಸಿದ ಸ್ನೇಹಿತರೊಬ್ಬರು, ಕೂಡಲೇ ದಿವಾಕರ್​ಗೆ ಮಾಹಿತಿ ನೀಡಿದ್ದಾರೆ. ದಿವಾಕರ್ ಅದನ್ನು ಪೊಲೀಸರಿಗೆ ತಿಳಿಸಿದ್ದು, ಈ ಮಾಹಿತಿ ಆಧರಿಸಿ ದಿಢೀರ್ ಕಾರ್ಯ ಪ್ರವೃತ್ತರಾದ ಬಡಾವಣೆ ಪೊಲೀಸರು, ಪ್ರಮುಖ ಆರೋಪಿ ಹೊಳೆನರಸೀಪುರ ಮೂಲದ ಕಾಲೇಜು ವಿದ್ಯಾರ್ಥಿಯಾದ ರೋಹನ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಈತನೊಂದಿಗೆ ಕೈ ಜೋಡಿಸಿದ್ದ ಮೂರೂ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಕನ್ನಡದ ಗ್ರಾಮಗಳ ಹೆಸರು ಮಲಯಾಳಂಗೆ ಮರುನಾಮಕರಣ ನಿಲ್ಲಿಸಿ: ಕೇರಳ ಸಿಎಂಗೆ ಹೆಚ್​ಡಿಕೆ ಪತ್ರ

ಲಾಕ್​ಡೌನ್ ಸಂದರ್ಭದಲ್ಲಿ ಕಾಲೇಜಿಗೆ ರಜೆ ಇತ್ತು. ಈ ನಡುವೆ ಖರ್ಚಿಗೆ ಹಣವಿಲ್ಲ ಎಂದು ಆಟೋ ಓಡಿಸಲು ರೋಹನ್​​ ಆರಂಭಿಸಿದ್ದನು. ಆಟೋ ಜೊತೆಯಲ್ಲೇ ಕಳ್ಳತನವನ್ನು ಮಾಡುತ್ತಿದ್ದ. ಆಟೋ ಓಡಿಸುವಾಗಲೆ ಬ್ರೀಡ್ ನಾಯಿಗಳನ್ನು ಸಾಕಿದ್ದ ನರ್ಸರಿ ಈತನ ಕಣ್ಣಿಗೆ ಬಿದ್ದಿತ್ತು. ಲಾಕ್​ಡೌನ್ ಕಾರಣದಿಂದ ಬೆಂಗಳೂರಿಂದ ಬಂದಿದ್ದ ತನ್ನ ಸ್ನೇಹಿತರ ಜೊತೆಗೂಡಿ ನಾಯಿಗಳನ್ನು ಕಳುವು ಮಾಡಿದ್ದನು. ಆದರೆ ಕದ್ದ ನಾಯಿಗಳ ಪೋಟೋಗಳನ್ನು ವಾಟ್ಸಪ್ ಗ್ರೂಪ್​​​ಗೆ ಹಾಕಿ ಪೊಲೀಸ್ರ ಕೈಗೆ ತಗಲಾಕಿಕೊಂಡಿದ್ದಾರೆ.

Last Updated : Jun 29, 2021, 5:23 AM IST

ABOUT THE AUTHOR

...view details