ಕರ್ನಾಟಕ

karnataka

ETV Bharat / state

ಹಾಸನ: ರಾಮೇನಹಳ್ಳಿ ಅರಣ್ಯ ಭಾಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ವಿಡಿಯೋ

ಅರಸೀಕೆರೆ-ಚಿತ್ರದುರ್ಗ ರಸ್ತೆಯ ರಾಮೇನಹಳ್ಳಿ ಅರಣ್ಯ ಪ್ರದೇಶದ ರಸ್ತೆಬದಿಯ ಪಡವನಹಳ್ಳಿಯಲ್ಲಿ ಚಿರತೆ ಕುಳಿತುಕೊಂಡಿದ್ದ ವಿಡಿಯೋ ವೈರಲ್​ ಆಗಿದೆ.

ರಾಮೇನಹಳ್ಳಿ ಅರಣ್ಯ ಭಾಗದಲ್ಲಿ ಚಿರತೆ ಪ್ರತ್ಯಕ್ಷ
ರಾಮೇನಹಳ್ಳಿ ಅರಣ್ಯ ಭಾಗದಲ್ಲಿ ಚಿರತೆ ಪ್ರತ್ಯಕ್ಷ

By

Published : Sep 8, 2020, 4:46 PM IST

ಹಾಸನ: ಕಳೆದ ಒಂದು ತಿಂಗಳಿನಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಮತ್ತೆ ರಾಮೇನಹಳ್ಳಿ ಅರಣ್ಯ ಪ್ರದೇಶದ ರಸ್ತೆಬದಿಯಲ್ಲಿ ಕಂಡುಬಂದಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ.

ಅರಸೀಕೆರೆ-ಚಿತ್ರದುರ್ಗ ರಸ್ತೆಯ ರಾಮೇನಹಳ್ಳಿ ಅರಣ್ಯ ಪ್ರದೇಶದ ರಸ್ತೆಬದಿಯ ಪಡವನಹಳ್ಳಿಯಲ್ಲಿ ಚಿರತೆ ಕುಳಿತುಕೊಂಡಿದ್ದ ವಿಡಿಯೋ ವೈರಲ್​ ಆಗಿದೆ. ಇದೇ ಮಾರ್ಗವಾಗಿ ಹಾಸನದಿಂದ ಜೆ.ಸಿ ಪುರಕ್ಕೆ ಹೋಗುತ್ತಿದ್ದ ಕಾರು ಪ್ರಯಾಣಿಕರಿಗೆ ಚಿರತೆ ಕಾಣಿಸಿಕೊಂಡಿದೆ.

ರಾಮೇನಹಳ್ಳಿ ಅರಣ್ಯ ಭಾಗದಲ್ಲಿ ಚಿರತೆ ಪ್ರತ್ಯಕ್ಷ

ರಾಮೇನಹಳ್ಳಿಯ ಅರಣ್ಯ ಪ್ರದೇಶ ದಾಟುವ ವೇಳೆ ಕಾರಿನ ಮುಂಭಾಗದಲ್ಲಿ ಚಿರತೆ ರಸ್ತೆ ದಾಟಿದೆ. ಇನ್ನು ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮೂರು ಮಂದಿ ಮಹಿಳೆಯರನ್ನು ಜಾಗರೂಕತೆಯಿಂದ ಜೆಸಿ ಪುರಕ್ಕೆ ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ಚಂದ್ರುರವರು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಭಾಗದಲ್ಲಿ ದಿನದಿಂದ ದಿನಕ್ಕೆ ಚಿರತೆ ಹಾವಳಿಗಳು ಹೆಚ್ಚಾಗುತ್ತಿದ್ದು ಕೇವಲ ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ಭಾಗದಲ್ಲಿ ಇದ್ದ ಚಿರತೆಗಳು ಈಗ ಕರಡಿಗಳ ವಾಸಸ್ಥಾನವಾಗಿರುವ ರಾಮೇನಹಳ್ಳಿ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ. ಇನ್ನು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ABOUT THE AUTHOR

...view details