ಕರ್ನಾಟಕ

karnataka

By

Published : Jun 9, 2022, 12:43 PM IST

ETV Bharat / state

ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ

ಮಂತ್ರಿ ಆಗ್ತೀನಾ, ಮುಖ್ಯಮಂತ್ರಿ ಆಗ್ತೀನಾ ಅಂತಾ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ. ನನ್ನ ಕಣ್ಮುಂದೆ ಇರೋದು ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರೋದು ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

BJP state vice president BY Vijayendra reaction, BJP state vice president BY Vijayendra visit Hassan, BJP state vice president BY Vijayendra news, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹಾಸನಕ್ಕೆ ಭೇಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಸುದ್ದಿ,
ವಿಜಯೇಂದ್ರ

ಹಾಸನ: ಮಂತ್ರಿ ಆಗ್ತೀನಾ, ಮುಖ್ಯಮಂತ್ರಿ ಆಗ್ತೀನಾ ಅಂತಾ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಅಂತಹ ತಂತ್ರಗಾರಿಕೆ ಏನಾದರೂ ಇದ್ದರೆ ಅದನ್ನು ವರಿಷ್ಠರು ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರಿಂದ ವಿಜಯೇಂದ್ರನಿಗೆ ಸನ್ಮಾನ

ವಿಜಯೇಂದ್ರ ಸಿಎಂ ಆಗಬೇಕು ಎಂಬ ಚರ್ಚೆಗೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು, ನಾನು ಯಡಿಯೂರಪ್ಪ ಅವರ ಮಗ ಇರಬಹುದು. ಆದರೆ, ಇವತ್ತು ರಾಜ್ಯದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಯಡಿಯೂರಪ್ಪ ಅವರ ಹೋರಾಟ, ಸಂಘಟನೆ ನೋಡಿದ್ದೇನೆ. ಪಕ್ಷ ಕೊಟ್ಟಿರುವ ಜವಾಬ್ದಾರಿ ಉಪಯೋಗಿಸಿಕೊಂಡು ಸಂಘಟನೆಗೆ ಬಲ ತುಂಬುವ ಕೆಲಸ ಮಾಡುತ್ತೇನೆ. ಮುಂದೆ ಎಂಎಲ್‍ಎ ಆಗಬೇಕಾ, ಮಂತ್ರಿ ಆಗಬೇಕಾ, ಮುಖ್ಯಮಂತ್ರಿ ಆಗಬೇಕಾ ಎಂಬ ಪ್ರಶ್ನೆ ಉದ್ಭವಿಸಲ್ಲ ಎಂದು ತಿಳಿಸಿದರು.

ಓದಿ:ಜನಸೇವೆ ಮಾಡಲು ಯಾವುದೇ ಸ್ಥಾನಮಾನ ಬೇಕಿಲ್ಲ: ಬಿ. ವೈ ವಿಜಯೇಂದ್ರ

ನಮ್ಮಕಣ್ಣ ಮುಂದೆ ಇರೋದು ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಸೇರಿ ಕೆಲಸ ಮಾಡುತ್ತಿದ್ದೇವೆ. ಈ ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಭವಿಷ್ಯದ ಬಗ್ಗೆ ನಾನು ಬಹಳ ತಲೆಕೆಡಿಸಿಕೊಂಡಿಲ್ಲ. ನಾನು ಮುಂದೆ ಏನು ಆಗಬೇಕು ಎಂದು ಪಕ್ಷ ನಿರ್ಧಾರ ಮಾಡುತ್ತೆ. ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟನೆ ಕೊಟ್ಟರು.

ಇದೇ ವೇಳೆ, ಅಭಿಮಾನಿಗಳ ನಿರೀಕ್ಷೆ ಬಗ್ಗೆ ಮಾತನಾಡಿದ ಅವರು, ಅವರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ, ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಆದರೆ, ಕೆಲವರು ಹಾಗೂ ವಿರೋಧ ಪಕ್ಷದವರು ಅವರಿಂದ ಸಹಾಯ ಪಡೆದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಅಂತಹ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಬಯಸಿದರೇ ಹೊರತು, ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎಂಬ ಆಸೆಯನ್ನು ವ್ಯಕ್ತ ಪಡಿಸಲಿಲ್ಲ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details