ಕರ್ನಾಟಕ

karnataka

ETV Bharat / state

ಹಳೇ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ಘರ್ಷಣೆ: 8 ಜನರಿಗೆ ಗಾಯ

ಮರಳು ದಂಧೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಹಾಗೂ ಹಳೇ ವೈಷಮ್ಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ 8 ಜನರಿಗೆ ಗಾಯವಾಗಿರುವ ಘಟನೆ ನಡೆದಿದೆ.

By

Published : Feb 6, 2019, 2:39 PM IST

ಗುಂಪು ಘರ್ಷಣೆ

ಗದಗ: ಮರಳು ದಂಧೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಹಾಗೂ ಹಳೇ ವೈಷಮ್ಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ 8 ಜನರಿಗೆ ಗಾಯವಾಗಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ.

ಗುಂಪು ಘರ್ಷಣೆ

ಸ್ಥಳಿಯ ಗ್ರಾಮ ಪಂಚಾಯತಿ ಅಧ್ಯಕ್ಷ ಮೈಲಾರಪ್ಪ ಜಾಲಮ್ಮನ್ನವರ ಸಂಬಂಧಿಗಳು ತಡರಾತ್ರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅಧ್ಯಕ್ಷ ಮೈಲಾರಪ್ಪ, ದ್ಯಾಮಣ್ಣ, ಮಂಜು ಕರಿ, ಮಹಾದೇವಪ್ಪ ಕರಿ ಎಂಬುವರು ಉಮೇಶ ದೊಡ್ಡಮನಿ, ನಾಗಾರಜ್ ಪೂಜಾರ ಎಂಬುವರ ಮನೆಗೆ ನುಗ್ಗಿ ಮಹಿಳೆಯರ ಮೇಲೆ ಸಹ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಬಿಡಿಸಲು ಬಂದ ಪದ್ಮಾ ಎಂಬ ಮಹಿಳೆ ಮೇಲೂ ಹಲ್ಲೆ ಮಾಡಿದ್ದಾರೆ. ಈ ಹಿಂದೆ ಗ್ರಾಮಸಭೆಯಲ್ಲಿ ಅಕ್ರಮ ಮರಳು ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ, ಜೊತೆಗೆ ಸಂಘಟನೆಗಳ ಹಳೇ ವೈಷಮ್ಯ, ಜಾತಿ ನಿಂದನೆ ಹೀಗೆ ಅನೇಕ ಘಟನೆಗಳು ಈ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಗುಂಪು ಘರ್ಷಣೆ

ಗಲಾಟೆ ವೇಳೆ ಎರಡು ಗುಂಪಿನ 8 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾತಲಗೇರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಕುರಿತು ಎರಡು ಗುಂಪಿನವರ ಮೇಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details