ಗದಗ:ಸಚಿವ ಸಂಪುಟ ರಚನೆ - ಪುನಾರಚನೆ, ವಿಸ್ತರಣೆ ಎಲ್ಲವೂ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು.
ಓದಿ: ಸಿದ್ದರಾಮಯ್ಯಗೆ ಮುಂದುವರಿದ ಚಿಕಿತ್ಸೆ: ಸದ್ಯಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಇಲ್ಲ!
ಗದಗ:ಸಚಿವ ಸಂಪುಟ ರಚನೆ - ಪುನಾರಚನೆ, ವಿಸ್ತರಣೆ ಎಲ್ಲವೂ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು.
ಓದಿ: ಸಿದ್ದರಾಮಯ್ಯಗೆ ಮುಂದುವರಿದ ಚಿಕಿತ್ಸೆ: ಸದ್ಯಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಇಲ್ಲ!
ನಗರದ ಖಾಸಗಿ ಹೊಟೇಲ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಫಕ್ಕಿರಸಾ ಬಾಂಡಗೆ ಹಾಗೂ ಸ್ನೇಹಿತರು ತಯಾರಿಸಿದ್ದ ದಿನಸಿ ಕಿಟ್ ಗಳನ್ನು ಸಚಿವ ಸಿ.ಸಿ ಪಾಟೀಲ್ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು. ನಗರದ ಖಾಸಗಿ ಹೊಟೇಲ್ ಆವರಣದಲ್ಲಿ ಸಾವಿರಾರು ಕಿಟ್ ಗಳನ್ನು ಹಂಚಿಕೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳು ಏನು, ಹೇಗೆ ನಿರ್ಧಾರ ಮಾಡುತ್ತಾರೆ ಎಂದು ನಾನು ಹೇಗೆ ಹೇಳಲಿ?. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಪ್ರಥಮ ಆದ್ಯತೆ ಕೊರೊನಾ ನಿಯಂತ್ರಣ ಮಾತ್ರ. ಸಂಪುಟ ವಿಚಾರವಾಗಿ ನನ್ನ ಸಲಹೆ ಕೇಳಿದರೆ, ನಾನು ಪಕ್ಷದ ಚೌಕಟ್ಟಿನಲ್ಲಿ ಹೇಳುತ್ತೇನೆ. ಪಕ್ಷದ ವಿಚಾರವನ್ನು ಮಾಧ್ಯಮದ ಎದುರು ಹಂಚಿಕೊಂಡು ಶಿಸ್ತು ಮೀರುವುದಿಲ್ಲ ಎಂದರು.
ರಾಜ್ಯದಲ್ಲಿ ಪರೀಕ್ಷೆ ರದ್ದತಿ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಮಕ್ಕಳ ಹಿತ ದೃಷ್ಟಿಯಿಂದ ಏನು ನಿರ್ಣಯ ತೆಗೆದುಕೊಳ್ಳಬೇಕು ಅನ್ನೋ ನನ್ನ ವಿಚಾರವನ್ನು ಸಂಪುಟದಲ್ಲಿ ಹೇಳುತ್ತೇನೆ. ಬೇರೆಯವರ ಖಾತೆಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು, ಸಚಿವ ಸಂಪುಟದಲ್ಲಿ ಪ್ರಸ್ತಾಪವಾದಾಗ ನನ್ನ ಅಭಿಪ್ರಾಯ ತಿಳಿಸುವೆ ಎಂದರು. ಈ ವಿಷಯದಲ್ಲೂ ಶಿಕ್ಷಣ ಸಚಿವರು, ಸಿ.ಎಂ ಹಾಗೂ ಅಧಿಕಾರಿಗಳು, ತಜ್ಞರ ಮಾಹಿತಿ ಸಂಗ್ರಹಿಸುತ್ತಾರೆ ಎಂದರು.