ಕರ್ನಾಟಕ

karnataka

ETV Bharat / state

ಕಳಸಾಗೆ ಗ್ರೀನ್ ಸಿಗ್ನಲ್ ಸಿಕ್ತು ಅಂಥ ವಿಜಯೋತ್ಸವ ಮಾಡಿದ್ರಿ... ಮತ್ತೆ ಯಾಕೆ ಅರಣ್ಯದ ಪರವಾನಗಿಗೆ ಅರ್ಜಿ: ಹೆಚ್​ ಕೆ ಪಾಟೀಲ್ ಪ್ರಶ್ನೆ - ಹರಿಕೆ ತೀರಿಸೋದು ಹಿರೋಯಿಜಂ ಅಲ್ಲ

ಕಳಸಾ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ವಿಚಾರಕ್ಕೆ ಕಿಡಿಕಾರಿದ ಶಾಸಕ ಹೆಚ್ ಕೆ ಪಾಟೀಲ್ ಅವರು, ಕೇಂದ್ರದ ಅರಣ್ಯ ಪರಿಸರ ಇಲಾಖೆಗೆ ಅರಣ್ಯ ಬೇಕು ಅಂತ ಯಾಕೆ ಅರ್ಜಿ ಹಾಕಿದ್ದಾರೆ. ಜನರನ್ನ ಎಷ್ಟು ಸಾರಿ ಮೋಸ ಮಾಡ್ತೀರಿ? ಎಂದು ಪ್ರಶ್ನಿಸಿದ್ದಾರೆ. ಸ್ಯಾಂಟ್ರೋ ರವಿ ಮಾತ್ರ ತಪ್ಪಿತಸ್ಥ ಅಲ್ಲ, ದುರ್ಬಳಕೆ ಮಾಡಿಕೊಂಡವರನ್ನು ಬಂಧಿಸುವಂತೆ ಆಗ್ರಹ

h k patil
Etv Bharat

By

Published : Jan 15, 2023, 5:32 PM IST

ಮಾಜಿ ಸಚಿವ ಹೆಚ್ ಕೆ ಪಾಟೀಲ ಸುದ್ದಿಗೋಷ್ಠಿ

ಗದಗ: ಸಾರ್ವಜನಿಕ ಕ್ಷೇತ್ರದಲ್ಲಿ ಮಹತ್ವದ ಹುದ್ದೆಯಲ್ಲಿರುವ ಶಾಸಕ ಬಸನಗೌಡ ಯತ್ನಾಳ್ ಮತ್ತು ಸಚಿವ ಮುರಗೇಶ್ ನಿರಾಣಿ ನಡುವಿನ ಜಗಳವು ನಾಗರಿಕ‌ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಮಂತ್ರಿಗಳಾದವರಿಗೆ ಬಾಯಿಗೆ ಹಿಡಿತ ಇಲ್ಲ ಅನ್ನೋದು ಒಂದು ದುರ್ದೈವದ ಸಂಗತಿ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ವ್ಯಂಗ್ಯವಾಗಿ ಕುಟುಕಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಸಹಿಸದಿರುವ ಮಾತುಗಳನ್ನು ಇವರು ಹರಿಬಿಡ್ತಿದ್ದಾರೆ. ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನ ನೀವು ಗಲೀಜ್ ಮಾಡ್ತಿದ್ದೀರಿ. ಸಿಎಂ ಸೇರಿದಂತೆ ಸಚಿವರು ಸಹ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ರಾಜಕಾರಣದ ಬಡಿದಾಟದಲ್ಲಿ ಎಲ್ಲರನ್ನ ಅವಮಾನಿಸುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಜಯಮೃತ್ಯುಂಜಯ ಶ್ರೀಗಳು ಕಾಂಗ್ರೆಸ್ ಅಣತಿಯಂತಿಲ್ಲ: ಜಯಮೃತ್ಯುಂಜಯ ಸ್ವಾಮೀಜಿ ಕಾಂಗ್ರೆಸ್ ಪಕ್ಷದ ಅಣತಿಯಂತೆ ವರ್ತನೆ ಮಾಡ್ತಿದ್ದಾರೆ ಅನ್ನೋ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಮ್ಮಿಂದೊಮ್ಮೆಲೆ ಸ್ವಾಮೀಜಿಗೆ ಹೋಗಿ ಯಾಕೆ ರಾಜಕಾರಣ ಹಚ್ಚಿದ್ರೋ ಗೊತ್ತಿಲ್ಲ. ಆ ಸ್ವಾಮೀಜಿಗಳು ನಮ್ಮ ಪಕ್ಷದ ಜೊತೆಗೆ ಸಂಪರ್ಕನೂ ಇಟ್ಗೊಂಡಿಲ್ಲ. ಅವರ ಬೇಡಿಕೆಗೆ ನಮ್ಮ ವೈಯಕ್ತಿಕ ನೆಲೆಯಲ್ಲಿ ಬೆಂಬಲಿಸಿರಬಹುದು. ನಮ್ಮ ಪಕ್ಷದ ನಾಯಕರು ಅವರೊಂದಿಗೆ ಇರಬಹುದು. ಸಾಮಾಜಿಕವಾಗಿ ಅವರ ಸಮುದಾಯಕ್ಕೆ ಸಂಬಂಧ ಇದ್ದವರು ಎನ್ನುವ ಕಾರಣಕ್ಕೆ ಆ ಹೋರಾಟದಲ್ಲಿ ಇದ್ದಾರೆ ವಿನಹ, ಅದರಲ್ಲಿ ರಾಜಕಾರಣ ಬೆರೆಸುವುದು ಸಜ್ಜನಿಕೆ ಲಕ್ಷಣ ಅಲ್ಲ. ಸ್ವಾಮೀಜಿಗಳು ರಾಜಕಾರಣಿಗಳಿಗೆ ಅನಾನುಕೂಲ ಆಗುವಂತ ನಿಲುವು ತೆಗೆದುಕೊಂಡಿರಬಹುದು. ಆದ್ರೆ ಸ್ವಾಮೀಜಿಗೆ ದಿಢೀರ್ ರಾಜಕಾರಣ ಹಚ್ಷೋದು ಸರಿಯಲ್ಲ ಎಂದು ಹೇಳಿದರು.

ಸ್ಯಾಂಟ್ರೋ ರವಿ ಒಬ್ಬನೇ ತಪ್ಪಿತಸ್ಥನಲ್ಲ: ಸ್ಯಾಂಟ್ರೋ ರವಿಯೊಂದಿಗೆ ರಾಜಕಾರಣಿಗಳ‌ ಲಿಂಕ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಯಾಂಟ್ರೋ ರವಿ ಮಾತ್ರ ತಪ್ಪಿತಸ್ಥ ಅಲ್ಲ. ಅವನನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆತನ ಬಳಕೆ ಮೂಲಕ ರಾಜ್ಯದ ಆಡಳಿತವನ್ನು ನಿಶಕ್ತಗೊಳಿಸಿ, ಶಿಥಿಲಗೊಳಿಸಿದ್ದೀರಿ. ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಅವನನ್ನು ಉಪಯೋಸಿಕೊಂಡು ಸರ್ಕಾರದ ಕ್ರೆಡಿಬಿಲಿಟಿ ಕಳೆದಿದ್ದೀರಿ. ಅವನನ್ನು ಉಪಯೋಗಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದವರೆಲ್ಲರನ್ನು ಬಂಧಿಸಬೇಕು. ವರ್ಗಾವಣೆ ಮಾಡಿದವನು, ವರ್ಗಾವಣೆ ಮಾಡಿಸಿಕೊಂಡವನು, ದುಡ್ಡು ಕೊಟ್ಟವನು ಮತ್ತು ದುಡ್ಡು ಇಸ್ಗೊಂಡವರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.

ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದವರನ್ನೂ ತಕ್ಷಣ ಬಂಧನ ಮಾಡಬೇಕು. ಸ್ಯಾಂಟ್ರೋ ರವಿಯನ್ನ ಬಂಧಿಸಿದ್ದೀರಿ ಅಷ್ಟೇ. ಅವನು ನೆಪ ಮಾತ್ರ. ಅವನನ್ನ ಉಪಯೋಗ ಮಾಡ್ಕೊಂಡು ಕಾನೂನು ಬಾಹಿರ ಕೆಲಸ ಮಾಡಿದವರ ಬಂಧನವೂ ಆಗಬೇಕು. ಕಳವು ಮಾಡಿಸಿದ ಸೂತ್ರದಾರನನ್ನು ಹಿಡಿಯಬೇಕು ಎಂದು ತಿಳಿಸಿದರು.

ಹರಿಕೆ ತೀರಿಸೋದು ಹಿರೋಯಿಜಂ ಅಲ್ಲ: ದೇವರಿಗೆ ಹರಿಕೆ ತೀರಿಸೋದು ಹಿರೋಯಿಜಂ ಅಲ್ಲ! ಹಿರಿಯ ಅಧಿಕಾರಿಯೊಬ್ಬರು ಅವನನ್ನ ಬಂಧನ ಮಾಡಿದ್ದೇವೆ ಅಂತ ದೇವರಿಗೆ ಹೋಗಿದ್ದಾರೆ. ಆದ್ರೆ ಪ್ರಶ್ನೆ ಸ್ಯಾಂಟ್ರೋ ರವಿ ಮಾತ್ರ ಅಲ್ಲ, ಹಿಂದೆ ಇರುವ ಶಕ್ತಿಗಳನ್ನು ಬಂಧನ ಮಾಡಿ ಎಂದು ಆಗ್ರಹಿಸಿದರು.

ಎಷ್ಟು ಸಾರಿ ಮೋಸ ಮಾಡ್ತೀರಿ?: ಕಳಸಾ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ವಿಚಾರಕ್ಕೆ ಕಿಡಿಕಾರಿದ ಅವರು, ಅರಣ್ಯದ ಪರವಾನಗಿ ಬೇಕಿಲ್ಲ ಅಂತ ವಿಜಯೋತ್ಸವ ಆಚರಣೆ ಮಾಡಿದ್ರು. ಆದ್ರೆ ಈಗ ಕೇಂದ್ರದ ಅರಣ್ಯ ಹಾಗೂ ಪರಿಸರ ಇಲಾಖೆಗೆ ಹೋಗಿ ಅರಣ್ಯ ಬೇಕು ಅಂತ ಅರ್ಜಿ ಹಾಕಿದ್ದಾರೆ. ಕೇಂದ್ರ ಸಚಿವರೇ ಹೇಳಿದ್ರು. ಸರ್ಕಾರದಿಂದಲೇ ಪರವಾಗಿ ಕೊಡಬಹುದು ಅಂತ. ಆದ್ರೆ ಈಗ ಅರ್ಜಿ ಯಾಕೆ ಸಲ್ಲಿಸಿದಿದ್ದೀರಿ ಅಂತ ಪ್ರಶ್ನೆ ಮಾಡಿದರು.

ಅಂದ್ರೆ ಕೇಂದ್ರದ ಸಚಿವರನ್ನು ನಂಬಬೇಕಾ...? ಅಥವಾ ರಾಜ್ಯ ಸರ್ಕಾರ ತಪ್ಪು ಮಾಡಿದೆನಾ...? ಇನ್ನೂ ಬಂಡೂರಿ ನಾಲಾಕ್ಕೆ ಎಷ್ಟು ಅರಣ್ಯ ಬೇಕು ಅನ್ನೋದರ ಬಗ್ಗೆ ಅರ್ಜಿ ಮಾಡಿಲ್ಲ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ, ಜನರನ್ನ ಎಷ್ಟು ಸಾರಿ ಮೋಸ ಮಾಡ್ತೀರಿ? ಯಡಿಯೂರಪ್ಪನವರು ಹಿಂದೊಮ್ಮೆ ಗೋವಾದ ಸಿಎಂ ಪತ್ರ ತೋರಿಸಿದರು. ನಮ್ಮ ಸರ್ಕಾರ ಬಂದ ಕೂಡಲೇ ಯೋಜನೆ ಅನುಷ್ಠಾನ ಮಾಡ್ತೀವಿ ಅಂದ್ರಿ. ಮುಂದೆ ಸುಳ್ಳು ಪತ್ರ ಅಂತ ಬಹಿರಂಗ ಆಯ್ತು. ಅದೇ ರೀತಿ ಮತ್ತೊಂದು ನಾಟಕ ಮಾಡ್ತಿದ್ದಾರೆ. ಬಂಡೂರಿ ನಾಲಾ ಅರ್ಜಿ ಕೊಟ್ಟೀದ್ದೀರಾ..? ಕಳಸಾ ಅರ್ಜಿ‌ ಕೊಟ್ಟೀದಿದ್ದೀರಿ. ಹೀಗಾಗಿ ನೀವು ಗೋವಾದವರಿಗೆ ಹ್ಯಾಂಡಲ್ ಕೊಡ್ತಿದ್ದೀರಿ. ಕೇಂದ್ರ ಸಚಿವರು ದೊಡ್ಡ ದೊಡ್ಡ ಮಾತಾಡ್ತಾರೆ ಎಂದು ಕಿಡಿ ಕಾರಿದರು.

ಇದನ್ನೂಓದಿ:50 ಲಕ್ಷ ರೂ. ಲಂಚ ಪ್ರಕರಣ: ಸಿಬಿಐನಿಂದ ರೈಲ್ವೆ ಡಿವಿಜನಲ್ ಮ್ಯಾನೇಜರ್ ಬಂಧನ

ABOUT THE AUTHOR

...view details