ಕರ್ನಾಟಕ

karnataka

ETV Bharat / state

ಪರಿಹಾರ ನೀಡುವಲ್ಲಿ ವಿಳಂಬ: ಗದಗ ಜಿಲ್ಲಾ ವಾಯುವ್ಯ ಸಾರಿಗೆ ಕಚೇರಿಯ ವಸ್ತುಗಳು ಜಪ್ತಿ - gadaga transport office

2009ರಲ್ಲಿ ಗದಗದ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ಬಸ್​ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಬೆಟಗೇರಿ ವಾಸಿ ಸಂಕಪ್ಪ ಶಿವಾನಂದ ಆಲೂರ (15) ಸ್ಥಳದಲ್ಲಿಯೇ ಮೃತಪಟ್ಟಿದ್ದ.

detained of materials of the gadaga transport office
ಪರಿಹಾರ ನೀಡುವಲ್ಲಿ ವಿಳಂಬ: ಗದಗ ಜಿಲ್ಲಾ ವಾಯುವ್ಯ ಸಾರಿಗೆ ಕಚೇರಿಯ ವಸ್ತುಗಳು ಜಪ್ತಿ

By

Published : Apr 16, 2021, 6:20 PM IST

ಗದಗ: ಬಸ್​​ ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಕುಟುಂಬಸ್ಥರಿಗೆ ಪರಿಹಾರದ ಹಣ ನೀಡುವಲ್ಲಿ ವಿಳಂಬ ಮಾಡಿದ ಕಾರಣ ವಾಯವ್ಯ ಸಾರಿಗೆ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಮುಳಗುಂದ ನಾಕಾ ಬಳಿ ಇರುವ ವಾಯುವ್ಯ ಸಾರಿಗೆ ಕಚೇರಿಯಲ್ಲಿನ ಕಂಪ್ಯೂಟರ್, ಮಾನಿಟರ್, ಸಿಪಿಯು ಸೇರಿದಂತೆ ಹಲವಾರು ವಸ್ತುಗಳನ್ನು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಪಾಟೀಲ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.

ಗದಗ ಜಿಲ್ಲಾ ವಾಯುವ್ಯ ಸಾರಿಗೆ ಕಚೇರಿಯ ವಸ್ತುಗಳು ಜಪ್ತಿ

2009ರಲ್ಲಿ ಗದಗದ ದಂಡಿನದುರ್ಗಮ್ಮ ದೇವಸ್ಥಾನದ ಬಳಿ ಬಸ್​ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಬೆಟಗೇರಿ ವಾಸಿ ಸಂಕಪ್ಪ ಶಿವಾನಂದ ಆಲೂರ (15) ಸ್ಥಳದಲ್ಲಿಯೇ ಮೃತಪಟ್ಟಿದ್ದ. ಹುಬ್ಬಳ್ಳಿ-ಬಾಗಲಕೋಟೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಸಂಕಪ್ಪನ ಸಾವು ಸಂಭವಿಸಿತ್ತು.

ಪರಿಹಾರಕ್ಕೆ ಆಗ್ರಹಿಸಿ 2009ರಲ್ಲಿ ಮೃತ ಬಾಲಕನ ಸಂಬಂಧಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ಕುರಿತು ಆದೇಶ ನೀಡಿದ್ದ ನ್ಯಾಯಾಲಯ ಗದಗ ಘಟಕದಿಂದ 5 ಲಕ್ಷ ಪರಿಹಾರದ ಹಣ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಇಲಾಖೆಯವರು 2014 ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಒಟ್ಟು 8 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿತ್ತು.

ಇದನ್ನೂ ಓದಿ:ಹಂಪಿಗೆ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ.. ಬೀಕೋ ಎನ್ನುತ್ತಿವೆ ಪ್ರವಾಸಿ ತಾಣಗಳು..

ಅದರಲ್ಲಿ 5 ಲಕ್ಷ ಪರಿಹಾರ ನೀಡಲಾಗಿತ್ತು. ಉಳಿದ 3 ಲಕ್ಷದ 16 ಸಾವಿರ ಪರಿಹಾರ ನೀಡದ ಕಾರಣ ಈಗ ಇಲಾಖೆಯ ವಸ್ತುಗಳ ಜಪ್ತಿಗೆ ಆದೇಶ ನೀಡಿಲಾಗಿದ್ದು, ಅರ್ಜಿದಾರರ ಪರ ವಕೀಲರಾದ ಅಶೋಕ ಹೊಸೂರ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆಯಿತು.

ABOUT THE AUTHOR

...view details