ಗದಗ: ಬೆಳಗಾವಿ ಕೋಬ್ರಾ ಬಟಾಲಿಯನ್ನಲ್ಲಿ ಕೆಲಸ ಮಾಡುತ್ತಿದ್ದ ಗದಗ ಮೂಲದ ಸಿಆರ್ಪಿಎಫ್ ಯೋಧ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಾಲೂಕಿನ ಹೊಂಬಳ ಗ್ರಾಮದ ಯೋಧ ಮೌಲಾಹುಸೇನ್ ಕಲೇಬಾಯಿ (39) ನಿಧನ ಹೊಂದಿದ್ದು, ಇವರು ಬೆಳಗಾವಿ ಕೋಬ್ರಾ ಬಟಾಲಿಯನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 19 ವರ್ಷಗಳಿಂದ ಜಮ್ಮು-ಕಾಶ್ಮೀರ, ಅಸ್ಸಾಂ, ಮಣಿಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು.