ETV Bharat / state

ಉಡುಪಿ: ವಾಟ್ಸ್ಆ್ಯಪ್ ಸಂದೇಶದಿಂದ ₹2 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಪಿಎಚ್‌ಡಿ ವಿದ್ಯಾರ್ಥಿನಿ - WhatsApp Scammer

author img

By ETV Bharat Karnataka Team

Published : Jul 4, 2024, 6:00 PM IST

ವಾಟ್ಸ್ಆ್ಯಪ್‌ನಲ್ಲಿ ಬಂದ ಸಂದೇಶದಂತೆ ಮುಂದುವರೆದ ಯುವತಿ, ವಂಚಕರ ಬಲೆಗೆ ಬಿದ್ದು 2 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.

ಮಣಿಪಾಲ ಪೊಲೀಸ್​​ ಠಾಣೆ
ಮಣಿಪಾಲ ಪೊಲೀಸ್​​ ಠಾಣೆ (ETV Bharat)

ಉಡುಪಿ: ಯುವತಿಯೊಬ್ಬಳು ವಾಟ್ಸ್ಆ್ಯಪ್‌ನಲ್ಲಿ ಬಂದ ಸಂದೇಶ ಕ್ಲಿಕ್ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಳೆ.

ಗಿಟಿಕಾ ಬಸಿನ್ ಎಂಬಾಕೆ ಹಣ ಕಳೆದುಕೊಂಡವರು. ಮಣಿಪಾಲದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡಿಕೊಂಡಿರುವ ಇವರು ಜೂನ್ 23ರಂದು ತನ್ನ ಕೊಠಡಿಯಲ್ಲಿರುವಾಗ Review Job & Pre Paid Tasks ಎಂಬ ಸಂದೇಶವನ್ನು ವಾಟ್ಸ್ಆ್ಯಪ್​ನಲ್ಲಿ ಸ್ವೀಕರಿಸಿದ್ದರು. ಈ ಸಂದೇಶದ ಪ್ರಕಾರ, ಆಕೆ ಅದರಲ್ಲಿರುವ ಟಾಸ್ಕ್​ಗಳನ್ನು ಪೂರ್ಣಗೊಳಿಸಿದ್ದು, ಬ್ಯಾಂಕ್​ ಖಾತೆಗೆ 205 ರೂ. ಜಮೆಯಾಗಿದೆ. ಇದಾದ ನಂತರ ಅಪರಿಚಿತ ವ್ಯಕ್ತಿ ಯುವತಿಯ ಟೆಲಿಗ್ರಾಂ ಆ್ಯಪ್​ಗೆ Linkdin idea 2024 Jrlul 827pd ಎಂಬ ಲಿಂಕ್ ಕಳುಹಿಸಿ ಸೇರುವಂತೆ​ ತಿಳಿಸಿದ್ದಾನೆ.

ಈ ಗ್ರೂಪ್‌ಗೆ ಸೇರ್ಪಡೆಯಾದ ಬಳಿಕ Pre Paid Tasksನಲ್ಲಿ ಹೂಡಿಕೆ ಮಾಡುವಂತೆ ತಿಳಿಸಲಾಗಿದೆ. ನಂತರ ಆಕೆ 4,600 ರೂ. ಹೂಡಿಕೆ ಮಾಡಿದ್ದು, ಖಾತೆಗೆ 5,850 ರೂ. ಜಮೆ ಮಾಡುವ ಮೂಲಕ ವಂಚಕರು ಯುವತಿಯನ್ನು ಮೋಸದ ಬಲೆಗೆ ಬೀಳಿಸಿದ್ದಾರೆ. ಎರಡು ಬಾರಿ ಅನಾಯಾಸವಾಗಿ ಹಣ ಗಳಿಸಿದ ಯುವತಿ "ಹೆಚ್ಚು ಹೂಡಿಕೆ ಮಾಡಿದರೆ ಇನ್ನೂ ಹೆಚ್ಚು ಹಣ ನೀಡುತ್ತೇವೆ'' ಎಂಬ ಅಪರಿಚಿತರ ಸೂಚನೆಯ ಮೇರೆಗೆ ವಿವಿಧ ಬ್ಯಾಂಕ್​ ಖಾತೆಗಳಲ್ಲಿದ್ದ ಒಟ್ಟು 2,20,100 ರೂ.ಗಳನ್ನು ಅಪರಿಚಿತರ ಬ್ಯಾಂಕ್​ ಖಾತೆಗೆ ಜಮೆ ಮಾಡಿದ್ದರು.

ಇದಾದ ಬಳಿಕ ವಂಚಕರು ಹಣ ಮರಳಿಸದೆ ವಂಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೋಸ ಹೋದ ಯುವತಿ ಮಣಿಪಾಲ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಬಿಟ್​​​ ಕಾಯಿನ್​​​​ ಹೂಡಿಕೆ: ಮಂಗಳೂರು ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ - Bitcoin Fraud

ETV Bharat Logo

Copyright © 2024 Ushodaya Enterprises Pvt. Ltd., All Rights Reserved.