ಗದಗ: ಜಿಲ್ಲೆಯ ರೋಣ ತಾಲೂಕಿನ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ರಭಸವಾಗಿ ಹರಿಯತ್ತಿದ್ದ ಹಳ್ಳದಲ್ಲಿ ಕುರಿಗಾಯಿಯೊಬ್ಬಬೈಕ್ ದಾಟಿಸಲು ಹೋಗಿದ್ದು, ನೀರಿನ ರಭಸಕ್ಕೆ ಬೈಕ್ ಕೊಚ್ಚಿ ಹೋಗಿದೆ.
ಕುರಿಗಾಹಿಯ ಹುಚ್ಚು ಸಾಹಸಕ್ಕೆ ಕೊಚ್ಚಿ ಹೋದ ದ್ವಿಚಕ್ರ ವಾಹನ: ಸ್ಥಳೀಯರ ನೆರವಿನಿಂದ ಪಾರು - gadag latest news
ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ಬಳಿ ಇರುವ ದೇವತೀ ಹಳ್ಳದಲ್ಲಿ ನಿಪ್ಪಾಣಿ ತಾಲೂಕಿನ ಕುರಿಗಾಹಿಯೊಬ್ಬರ ಬೈಕ್ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ನಂತರ ಗ್ರಾಮಸ್ಥರ ಸಹಾಯದಿಂದ ಹಳ್ಳದ ಗುಂಡಿಗೆ ಬಿದ್ದ ಬೈಕ್ ಅನ್ನು ಹೊರ ತೆಗೆಯಲಾಯಿತು.
ಗದಗ ಜಿಲ್ಲೆ ರೋಣ ತಾಲೂಕಿನ ದೇವತೀ ಹಳ್ಳಿಯಲ್ಲಿ ಕೊಚ್ಚಿ ಹೋದ ಬೈಕ್
ರೋಣ ತಾಲೂಕಿನ ಸವಡಿ ಗ್ರಾಮದ ಬಳಿಯ ದೇವತೀ ಹಳ್ಳದಲ್ಲಿ ಈ ಘಟನೆ ನಡೆದಿದೆ. ನಿಪ್ಪಾಣಿ ತಾಲೂಕಿನ ಕುರಿಗಾಹಿಯೊಬ್ಬ ಅಪಾಯವನ್ನು ಎಳೆದುಕೊಂಡಿದ್ದು, ಸವಡಿ ಗ್ರಾಮದ ಯುವಕರ ಸಹಾಯದಿಂದ ಹಳ್ಳದ ಗುಂಡಿಗೆ ಬಿದ್ದ ಬೈಕ್ ಹಾಗೂ ಕುರಿಗಾಯಿಯನ್ನು ರಕ್ಷಿಸಿದ್ದಾರೆ.
ರೋಣ ತಾಲೂಕಿನ ಅಬ್ಬಿಗೇರಿ, ಸವಡಿ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾದ ಪರಿಣಾಮ ದೇವತೀ ಹಳ್ಳ ತುಂಬಿ ಹರಿಯುತ್ತಿದೆ.
Last Updated : Oct 2, 2019, 12:06 PM IST