ಕರ್ನಾಟಕ

karnataka

ಕಿಟ್ ವಿತರಣೆಯಲ್ಲಿ ತಾರತಮ್ಯ ಬೇಡ : ನೊಂದ ಮಹಿಳೆಯ ಕಣ್ಣೀರು!

ಬೆಟಗೇರಿಯಲ್ಲಿ ರೈತರು, ವ್ಯಾಪಾರಿಗಳು, ಶ್ರೀಮಂತ ದಾನಿಗಳಿಂದ ಭಿಕ್ಷಾ ಅಭಿಯಾನ ಮೂಲಕ ದವಸ ಧಾನ್ಯಗಳನ್ನು ಸಂಗ್ರಹಿಸಿ, ನಂತರ ಅದನ್ನ ರೈತರ ಹೆಸರಿನಲ್ಲಿ ಬಡವರಿಗೆ ಹಂಚಿಕೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಎಲ್ಲರಿಗೂ ಅಗತ್ಯ ವಸ್ತುಗಳನ್ನ ನೀಡುವಂತೆ ಮನವಿ ಮಾಡಿದ್ದಾರೆ.

By

Published : May 2, 2020, 7:08 PM IST

Published : May 2, 2020, 7:08 PM IST

Updated : May 2, 2020, 8:55 PM IST

food for poor people in gadaga
ಬಿಜೆಪಿ ಮುಖಂಡ ಅನೀಲ ಮೆಣಸಿನಕಾಯಿ

ಗದಗ : ಲಾಕ್​ಡೌನ್ ಹಿನ್ನೆಲೆ ಬಡವರು, ಕೂಲಿ ಕಾರ್ಮಿಕರು ಅಶಕ್ತ ವರ್ಗಕ್ಕೆ ಹೊತ್ತಿನ ಊಟಕ್ಕೂ ಕಷ್ಟವಾಗಿದೆ. ಈ ಸಂದರ್ಭದಲ್ಲಿ ನಗರದಲ್ಲಿ ಬಿಜೆಪಿ ಮುಖಂಡ ಅನಿಲ್​​ ಮೆಣಸಿನಕಾಯಿ, ಉಳ್ಳ ರೈತರ ಬಳಿ ಹೋಗಿ ದವಸ ಧಾನ್ಯಗಳನ್ನು ಭಿಕ್ಷೆ ರೂಪದಲ್ಲಿ ಸಂಗ್ರಹಿಸಿ ಬಡವರಿಗೆ ಹಂಚಿದ್ದಾರೆ.

ಬೆಟಗೇರಿಯಲ್ಲಿ ರೈತರು, ವ್ಯಾಪಾರಸ್ಥರು, ಶ್ರೀಮಂತ ದಾನಿಗಳಿಂದ ಭಿಕ್ಷಾ ಅಭಿಯಾನ ಮೂಲಕ ದವಸ ಧಾನ್ಯಗಳನ್ನು ಸಂಗ್ರಹಿಸಿ, ನಂತರ ಅದನ್ನ ರೈತರ ಹೆಸರಿನಲ್ಲಿ ಬಡವರಿಗೆ ಹಂಚಿಕೆ ಮಾಡಲಾಗುತ್ತಿದೆ.

ಬಿಜೆಪಿ ಮುಖಂಡ ಅನಿಲ್​​ ಮೆಣಸಿನಕಾಯಿ,

ಕಿಟ್ ವಿತರಣೆಗೆ ಮುಂದಾದ ಬಿಜೆಪಿ ಮುಖಂಡರನ್ನುಕಂಡ ಮಹಿಳೆಯೊಬ್ಬರು, ಕಿಟ್ ಕೊಡಲು ಬಂದ ಸಂದರ್ಭದಲ್ಲಿ ದಾನಿಗಳು ತಾರತಮ್ಯ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಕೆಲವರಿಗೆ ಕೊಡುವುದು, ಕೆಲವರಿಗೆ ಬಿಡುವುದು ಮಾಡ್ತಿದ್ದಾರೆ. ಇದರಿಂದ ಆಹಾರ ಸಿಗದೇ ಇರುವವರಿಗೆ ಸಾಕಷ್ಟು ನೋವಾಗುತ್ತೆ. ನಮ್ಮಲ್ಲಿ ತಾರತಮ್ಯ ಬೇಡ. ನೀವಾದ್ರೂ ಎಲ್ಲರಿಗೂ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಕೈಮುಗಿದು ಮನವಿ ಮಾಡಿಕೊಂಡರು.

Last Updated : May 2, 2020, 8:55 PM IST

ABOUT THE AUTHOR

...view details