ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಗೆ ಕೊರೊನಾ ಗ್ರಹಣ: ಒಂದೇ ದಿನ ಪತ್ತೆಯಾಯ್ತು 18 ಪ್ರಕರಣ

ಈ ಮೊದಲು ಮೇ 23 ರಂದು ಒಂದೇ ದಿನ 15 ಪ್ರಕರಣಗಳು ದಾಖಲಾಗಿದ್ದು ಇಲ್ಲಿಯವರೆಗಿನ ಗರಿಷ್ಠ ಸಂಖ್ಯೆಯಾಗಿತ್ತು. ಒಮ್ಮೆಲೆ 18 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಲ್ಲಿನ ಆತಂಕ ಇನ್ನಷ್ಟು ಹೆಚ್ಚಿದೆ.

By

Published : Jun 21, 2020, 10:19 PM IST

gadag district
ಗದಗ ಜಿಲ್ಲೆಗೆ ಕೊರೊನಾ

ಗದಗ:ಇಂದು ಒಂದೇ ದಿನ 18 ಕೊರೊನಾ ಪಾಸಿಟಿವ್ ಕೇಸ್‌ಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ ಪಾಸಿಟಿವ್ ಕೇಸ್‌ಗಳು ಕಂಡುಬಂದಿದೆ.

ಹೆಲ್ತ್ ಬುಲೆಟಿನ್‌ನಲ್ಲಿರುವ ರೋಗಿಗಳ ವಿವರ:

P-8723 29 ವರ್ಷದ ಮಹಿಳೆ, P-8724 35 ವರ್ಷದ ಪುರುಷ , P-8725 65 ವರ್ಷದ ಪುರುಷ, P-8726 75 ಮಹಿಳೆ, P-8727 27 ವರ್ಷದ ಪುರುಷ, P-8728 28 ವರ್ಷದ ಮಹಿಳೆ, P-8729 53 ವರ್ಷದ ಮಹಿಳೆ, P-8730 6 ವರ್ಷದ ಬಾಲಕ, P-8731 31 ವರ್ಷದ ಮಹಿಳೆ, P-8732 55 ವರ್ಷದ ಪುರುಷ, P-8733 24 ವರ್ಷದ ಪುರುಷ, P-8734 21 ವರ್ಷದ ಮಹಿಳೆ, P-8735 33 ಪುರುಷ, P-8736 68 ವರ್ಷದ ಮಹಿಳೆ, P-8737 6 ವರ್ಷದ ಬಾಲಕಿ, P-8738 31 ಪುರುಷ, P-8739 12 ವರ್ಷದ ಬಾಲಕ, P-8740 5 ವರ್ಷದ ಬಾಲಕ

ಈ ಮೊದಲು ಮೇ 23 ರಂದು ಒಂದೇ ದಿನ 15 ಪ್ರಕರಣಗಳು ದಾಖಲಾಗಿದ್ದು ಇಲ್ಲಿಯವರೆಗಿನ ಗರಿಷ್ಠ ಸಂಖ್ಯೆಯಾಗಿತ್ತು. ಒಮ್ಮೆಲೆ 18 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಲ್ಲಿನ ಆತಂಕ ಇನ್ನಷ್ಟು ಹೆಚ್ಚಿದೆ. ಮೊದಲ ಬಾರಿಗೆ ಗದಗ ತಾಲೂಕಿನಾಚೆಯೂ ಸೋಂಕು ಪಸರಿಸಿದ್ದು ಶಿರಹಟ್ಟಿ ಮತ್ತು ರೋಣ ತಾಲೂಕಿಗೂ ವ್ಯಾಪಿಸಿದೆ.

ಗದಗದಲ್ಲಿ ಈ ಮೊದಲು ಪಾಸಿಟಿವ್ ಆಗಿದ್ದ ವ್ಯಕ್ತಿಯ ಸಂಪರ್ಕದಿಂದ ಏಳು ಜನರಿಗೆ, ತಾಲೂಕಿನ ಕೋಟುಮಚಗಿಯ ಪಾಸಿಟಿವ್ ವೃದ್ಧನ ಸಂಪರ್ಕದಿಂದ 6 ಜನರಿಗೆ, ಶಿರಹಟ್ಟಿ ತಾಲೂಕಿನ ಮಜ್ಜೂರು ತಾಂಡಾದ ಇಬ್ಬರಿಗೆ, ರೋಣ ತಾಲೂಕಿನ ಕುರಡಗಿಯ ಒಬ್ಬರಿಗೆ ಮತ್ತು ಮಹಾರಾಷ್ಟ್ರದಿಂದ ಮರಳಿದ ಇಬ್ಬರಿಗೆ ಸೋಂಕು ಖಚಿತವಾಗಿತ್ತು. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 78 ಕ್ಕೇರಿದ್ದು, ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 44 ಜನರು ಗುಣಮುಖರಾಗಿದ್ದಾರೆ. ಸದ್ಯ 32 ಸಕ್ರಿಯ ಕೇಸುಗಳಿದ್ದು, ಇವರಿಗೆ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details