ಧಾರವಾಡ:ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಚುರುಕು ಗೊಂಡಿದೆ. ಮರಳು ವ್ಯಾಪಾರಿ ಫಯಾಜ್ಗೆ ಮೂರನೇ ದಿನವೂ ಸಿಬಿಐ ಅಧಿಕಾರಿಗಳು ಡ್ರಿಲ್ ನಡೆಸಿದ್ದಾರೆ.
ಯೋಗೀಶಗೌಡ ಹತ್ಯೆ ಪ್ರಕರಣ: ಧಾರವಾಡದಲ್ಲಿ ಮುಂದುವರೆದ ಸಿಬಿಐ ವಿಚಾರಣೆ
ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನವೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಧಾರವಾಡ ಉಪನಗರ ಠಾಣೆ
ಧಾರವಾಡ ಉಪನಗರ ಠಾಣೆಯಲ್ಲಿ ಕಳೆದ ಮೂರು ದಿನಗಳಿಂದ ಸಿಬಿಐ ಅಧಿಕಾರಿಗಳು ಯೋಗೀಶ್ ಕೊಲೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಮರಳು ವ್ಯಾಪಾರಿಯಾಗುರುವ ಫಯಾಜ್ ಬಸ್ತವಾಡನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಫಯಾಜ್ ಜೊತೆ ಆತನ ಸ್ನೇಹಿತ ಕೃಷ್ಣಾಗೂ ಸಿಬಿಐ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ. ಫಯಾಜ್ ಬಸ್ತವಾಡ ಅವರಿಗೆ ಕೃಷ್ಣಾ ಆಪ್ತ ಸ್ನೇಹಿತನಾಗಿದ್ದಾನೆ.