ಹುಬ್ಬಳ್ಳಿ: ತನ್ನ ಪತಿ ಕೊಲೆ ಮಾಡಿಸಲು ಸುಪಾರಿ ಕೊಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ಪತ್ನಿಯೇ ಪತಿಯ ವಿರುದ್ಧ ದೂರು ನೀಡಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಜೀವ ಬೆದರಿಕೆ ಆರೋಪ: ಹುಬ್ಬಳ್ಳಿಯ ಖ್ಯಾತ ವೈದ್ಯನ ವಿರುದ್ಧ ದೂರು ನೀಡಿದ ಪತ್ನಿ - complaint against his husband
ತನ್ನ ಪತಿಯ ಜೊತೆ ಮೂರ್ನಾಲ್ಕು ವರ್ಷದಿಂದ ಕೌಟುಂಬಿಕ ಭಿನ್ನಾಭಿಪ್ರಾಯಗಳಿವೆ. ಈ ಕಾರಣಕ್ಕೆ ನನ್ನ ಹೆಸರಿನಲ್ಲಿರುವ ಆಸ್ತಿಯನ್ನ ಬಿಟ್ಟು ಕೊಡುವಂತೆ ಪೀಡಿಸುತ್ತಿದ್ದು, ತನಗೆ ಜೀವ ಬೆದರಿಕೆ ಇದೆ ಎಂದು ಖ್ಯಾತ ವೈದ್ಯನ ವಿರುದ್ಧ ಅವರ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜೀವ ಬೆದರಿಕೆ ಆರೋಪ: ಖ್ಯಾತ ವೈದ್ಯನ ವಿರುದ್ಧ ದೂರು ದಾಖಲಿಸಿದ ಪತ್ನಿ
ಬಾಲಾಜಿ ಆಸ್ಪತ್ರೆಯ ಡಾ.ಕ್ರಾಂತಿಕಿರಣ ಅವರ ಪತ್ನಿ ಡಾ.ಶೋಭಾ ಸುಣಗಾರ ದೂರು ನೀಡಿದವರು. ತನ್ನ ಪತಿಯ ಜೊತೆ ಮೂರ್ನಾಲ್ಕು ವರ್ಷಗಳಿಂದ ಕೌಟುಂಬಿಕ ಭಿನ್ನಾಭಿಪ್ರಾಯಗಳಿವೆ. ಈ ಕಾರಣಕ್ಕೆ ನನ್ನ ಹೆಸರಿನಲ್ಲಿರುವ ಆಸ್ತಿಯನ್ನ ಬಿಟ್ಟು ಕೊಡುವಂತೆ ಪೀಡಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಾಲಾಜಿ ಆಸ್ಪತ್ರೆಯ ಅಕೌಂಟೆಂಟ್ ಮಹೇಶ್ವರಿ ಹೊಸಗೌಡರ ಕೂಡಾ ಜೀವ ಬೆದರಿಕೆ ಹಾಕಿದ್ದಾರೆಂದು ಡಾ.ಶೋಭಾ ಸುಣಗಾರ ಆರೋಪಿಸಿದ್ದಾರೆ. ಘಟನೆ ಸಂಬಂಧ ವಿದ್ಯಾನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.