ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಉಣಕಲ್ ಕೆರೆಯು ಅವ್ಯವಸ್ಥೆಯ ತಾಣವಾಗಿದ್ದು, ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದೆ.
ಸ್ಮಾರ್ಟ್ಸಿಟಿಗೆ ಆಯ್ಕೆಯಾದ್ರೂ ಮುಗಿಯದ ಸಮಸ್ಯೆ: ಇದು ಉಣಕಲ್ ಕೆರೆ ಅವ್ಯವಸ್ಥೆ - hubballi unakal lake news
ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಹುಬ್ಬಳ್ಳಿಯ ಉಣಕಲ್ ಕೆರೆ ಆಯ್ಕೆಯಾಗಿದ್ದರೂ ಕೂಡ ಅವ್ಯವಸ್ಥೆಗೆ ಕೊನೆಯೇ ಇಲ್ಲದಂತಾಗಿದೆ. ಪ್ರವಾಸಿಗರಿಗಾಗಿ ಇಟ್ಟಿರುವ ಬೋಟ್ಗಳು ಶಿಥಿಲಾವಸ್ಥೆಗೆ ತಲುಪಿದ್ದು, ಆಕರ್ಷಣೆಗಾಗಿ ಬೆಳೆಸಿದ್ದ ಹುಲ್ಲಿನ ಹಾಸು ನಿರ್ವಹಣೆಯಿಲ್ಲದೆ ಜಾನುವಾರುಗಳು ಮೇಯಲು ಬಿಟ್ಟಂತಾಗಿದೆ.
ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಹುಬ್ಬಳ್ಳಿಯ ಉಣಕಲ್ ಕೆರೆ ಆಯ್ಕೆಯಾಗಿದ್ದರೂ ಕೂಡ ಅವ್ಯವಸ್ಥೆಗೆ ಕೊನೆಯೇ ಇಲ್ಲದಂತಾಗಿದೆ. ಪ್ರವಾಸಿಗರಿಗಾಗಿ ಇಟ್ಟಿರುವ ಬೋಟ್ಗಳು ಶಿಥಿಲಾವಸ್ಥೆ ತಲುಪಿದ್ದು, ಆಕರ್ಷಣೆಗಾಗಿ ಬೆಳೆಸಿದ್ದ ಹುಲ್ಲಿನ ಹಾಸು ನಿರ್ವಹಣೆಯಿಲ್ಲದೆ ಜಾನುವಾರುಗಳು ಮೇಯಲು ಬಿಟ್ಟಂತಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಉದ್ಯಾನವನಗಳು ಬಂದ್ ಆಗಿದ್ದು, ಸರಿಯಾದ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸೂಕ್ತ ಕ್ರಮ ಜರುಗಿಸಬೇಕಿದೆ. ಅಲ್ಲದೇ ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿ ಕೈಗೊಂಡು ಕೂಡಲೇ ಉಣಕಲ್ ಕೆರೆಗೆ ಹೊಸ ರೂಪವನ್ನು ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.