ಧಾರವಾಡ: ಮಹಿಳೆಯೊಬ್ಬರನ್ನು ವಂಚಿಸಿ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಮೂವರು ರೌಡಿಶೀಟರ್ಗಳನ್ನ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಗೆ ವಂಚಿಸಿ ಜೀವಬೆದರಿಕೆ: ಮೂವರು ರೌಡಿಶೀಟರ್ ಅರೆಸ್ಟ್ - three rowdy sheeter arrest
ಮಹಿಳೆಯೊಬ್ಬರನ್ನು ವಂಚಿಸಿ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಮೂವರು ರೌಡಿಶೀಟರ್ಗಳನ್ನ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫ್ರುಟ್ ಇರ್ಫಾನ್ ಎಂದೇ ಕುಖ್ಯಾತಿ ಗಳಿಸಿರುವ ರೌಡಿಶೀಟರ್ ಇರ್ಫಾನ್ ಸೈಯ್ಯದ್, ಪೆಂಡಾರಗಲ್ಲಿ ನಿವಾಸಿಯಾದ ರೌಡಿಶೀಟರ್ ಮಕ್ತುಂ ಸಾಬ ಹಾಗೂ ಅತ್ತಿಕೊಳ್ಳದ ನಿವಾಸಿ ರೌಡಿಶೀಟರ್ ಮಹಮ್ಮದ್ ಹ್ಯಾರಿಸ್ ಬಂಧಿತರು. ಹೆಬ್ಬಳ್ಳಿ ಅಗಸಿ ನಿವಾಸಿ ತಾಜಬೀ ಮುಲ್ಲಾ ಎಂಬುವವರ ಜಮೀನು ವಿವಾದದಲ್ಲಿ ಮಧ್ಯೆ ಪ್ರವೇಶಿಸಿ, ವಂಚನೆ ಮತ್ತು ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಈ ಮೂವರನ್ನು ಬಂಧಿಸಿಲಾಗಿತ್ತು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಆರೋಪದ ಮೇರೆಗೆ ಬಂಧಿಸಿ ಸೆ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆ ಪ್ರಕರಣದಲ್ಲಿ ಬಿಡುಗಡೆ ಆಗುತ್ತಿದ್ದಂತೆ ಮಹಿಳೆಗೆ ವಂಚಿಸಿ ಜೀವಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿಸಲಾಗಿದೆ.