ಕರ್ನಾಟಕ

karnataka

ETV Bharat / state

ಕ್ರೈಂ ಕಡಿವಾಣಕ್ಕೆ ಹು-ಧಾ ಕಮೀಷನರೇಟ್ ಚಿಂತನೆ : 'ವಿಶೇಷ ಗಸ್ತು ಪಡೆ' ರಚೆನೆಗೆ ನಿರ್ಧಾರ..!

ಹುಬ್ಬಳ್ಳಿ ಧಾರವಾಡದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕ್ರೈಂ ಚಟುವಟಿಕೆಗಳಿಗೆ ಕಡಿವಾಣಹಾಕಲು ಮುಂದಾಗಿರುವ ನಗರ ಪೊಲೀಸ್​ ಆಯುಕ್ತರ 'ವಿಶೇಷ ಗಸ್ತು ಪಡೆ' ನಿಯೋಜನೆ ಮಾಡಲಿದ್ದಾರೆ. ಈ ಪಡೆಯು ರೌಡಿಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಲಿದೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ಪ್ರವೃತ್ತವಾಗಲಿದೆ.

criminal-activity-in-hubli-dharwad
ಹು-ಧಾ ಕಮೀಷನರೇಟ್

By

Published : Aug 3, 2021, 3:34 PM IST

ಹುಬ್ಬಳ್ಳಿ : ದಿನದಿಂದ ದಿನಕ್ಕೆ ಅವಳಿ ನಗರದಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಅಪರಾಧ ಪ್ರಕರಣ ನಿಯಂತ್ರಿಸಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಹು-ಧಾ ಪೊಲೀಸ್‌ ಕಮಿಷನರೇಟ್‌ ‘ವಿಶೇಷ ಗಸ್ತು ಪಡೆ’ ರಚಿಸಿ ಆಯ್ದ ಪ್ರದೇಶಗಳಲ್ಲಿ ನಿಯೋಜಿಸಲು ಚಿಂತನೆ ನಡೆಸಿದೆ. ರೌಡಿಗಳ ಕಾರ್ಯ ಚಟುವಟಿಕೆ ಅಧಿಕವಾಗಿರುವ ಹಾಗೂ ಅವರ ನಿವಾಸದ ಸುತ್ತ–ಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ.

ಹೆಚ್ಚುತ್ತಿರುವ ಅಪರಾಧ ಪ್ರಕರಣ

ರೌಡಿಗಳು ಹಾಗೂ ಅವರ ಸಹಚರರು ಹತ್ಯೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳಲ್ಲಿ ಇತ್ತೀಚೆಗೆ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ನಗರದ ಹೊರವಲಯದಲ್ಲಿ ಸಾರ್ವಜನಿಕರನ್ನು ತಡೆದು ಬೆದರಿಸಿ ಹಣ ವಸೂಲಿ ಸಹ ಮಾಡುತ್ತಿದ್ದ ಪ್ರಕರಣಗಳು ಸಹ ವರದಿಯಾಗಿದ್ದವು. ಅಲ್ಲದೇ ಕೆಲವು ಪ್ರದೇಶಗಳು ಇವರ ಅಡ್ಡೆಗಳಾಗಿ ಬದಲಾಗಿದ್ದು, ಇವುಗಳನ್ನು ಹತ್ತಿಕ್ಕಲು ಕಮಿಷನರ್​ ಮುಂದಾಗಿದ್ದಾರೆ.

ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ

ಅನುಮಾನಾಸ್ಪದವಾಗಿ ಬೈಕ್‌ಗಳಲ್ಲಿ ಸಂಚರಿಸುವವರನ್ನು ತಡೆದು ಪ್ರಶ್ನಿಸುವುದು, ಸಂಶಯಾಸ್ಪದ ವ್ಯಕ್ತಿಯ ಚಲನ–ವಲನದ ಮೇಲೆ ನಿಗಾ ಇಡುವುದು, ಅವರ ಮನೆಗಳಿಗೆ ತೆರಳಿ ಮಾಹಿತಿ ಸಹ ಸಂಗ್ರಹಿಸಲಾಗುತ್ತಿದೆ. ಅವಳಿ ನಗರದ ಒಂಬತ್ತು ಠಾಣೆಗಳಲ್ಲಿ ವಿಶೇಷ ಗಸ್ತು ಪಡೆ ರಚಿಸಲಾಗಿದ್ದು, ರೌಡಿಗಳ ದಿನಚರಿ ಮೇಲೆ ವಿಶೇಷ ಗಮನ ಇಡಲಾಗುತ್ತಿದೆ.

40 ರೌಡಿಗಳ ಮೇಲೆ ಕ್ರಮ

ವಾರದಿಂದ ಇತ್ತಿಚೇಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ 40 ರೌಡಿಗಳು ಸೇರಿ 50 ಮಂದಿಯಿಂದ 1 ಲಕ್ಷ ಮೌಲ್ಯದ ಷರತ್ತು ಬದ್ಧ ಬಾಂಡ್‌ ಬರೆಸಿಕೊಳ್ಳಲಾಗಿದೆ. ಬಾಂಡ್‌ ನೀಡಿರುವುದರಿಂದ ಅವರು ಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ, ಕೋರ್ಟ್‌ನಲ್ಲಿ ಜಾಮೀನು ಸಹ ಸಿಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.

ABOUT THE AUTHOR

...view details