ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮಹಾಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು.
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಕಳೆಗಟ್ಟಿದ್ದ ಶಿವರಾತ್ರಿ ಸಂಭ್ರಮ - ಶಿವರಾತ್ರಿ ಸಂಭ್ರಮ
ಇಂದು ರಾಜ್ಯಾದ್ಯಂತ ಮಹಾ ಶಿವರಾತ್ರಿ ಸಂಭ್ರಮ ವಿಜೃಂಭಣೆಯಿಂದ ನಡೆದಿದ್ದು, ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಂಭ್ರಮದಿಂದ ಸಾವಿರಾರೂ ಭಕ್ತರು ಶಿವನ ಸ್ಮರಣೆ ಮಾಡಿದರು.
Shivratri celebration in Hubli
ಮಹಾಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಸಿದ್ಧಾರೂಢ ಸ್ವಾಮಿ ಮಠದ ಆವರಣದಲ್ಲಿ ಜಾಗರಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ವಿವಿಧ ರಾಜ್ಯಗಳಿಂದ ಸಾವಿರಾರೂ ಭಕ್ತರು ಆಗಮಿಸಿ ಜಾಗರಣೆಯಲ್ಲಿ ಪಾಲ್ಗೊಂಡು ಮಠದ ಶ್ರೀಗಳು ಹಾಗೂ ಭಕ್ತರು ಶಿವನಾಮ ಸ್ಮರಣೆ ಮಾಡಿ ತಮ್ಮ ಭಕ್ತಿ ಸಮರ್ಪಿಸಿದರು.
ಇನ್ನು ಮಠಕ್ಕೆ ಬೆಳಿಗ್ಗೆಯಿಂದಲೇ ಭಕ್ತರ ಮಹಾಪೂರವೆ ಹರಿದು ಬಂದಿದ್ದು, ಸಂಜೆ ವೇಳೆ ನಾನಾ ಜಿಲ್ಲೆಗಳ ಭಜನಾ ಮಂಡಳಿಗಳು ಆಗಮಿಸಿ ವಿಶೇಷ ಕಾರ್ಯಕ್ರಮಗಳು ಜರುಗಿದವು.