ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ: ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರು ಸಾವು - three died in Road accidents

ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಕಾರುಗಳ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕುಂದಗೋಳ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.

Road accidents
ರಸ್ತೆ ಅಪಘಾತ

By

Published : Jan 26, 2020, 2:29 PM IST

Updated : Jan 26, 2020, 4:06 PM IST

ಧಾರವಾಡ:ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕುಂದಗೋಳ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರು ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆ.

ಕುಂದಗೋಳ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ

ಬೆಳಗ್ಗೆಯಷ್ಟೇ ಶಿವಾನಂದ ಮಠದ ಶಾಲೆಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಸ್ವಾಮೀಜಿ ನೆರವೇರಿಸಿದ್ದರು. ಬಳಿಕ ಧಾರವಾಡದಲ್ಲಿ ನಡೆಯುತ್ತಿದ್ದ ಭಕ್ತರೊಬ್ಬರ ಮದುವೆಗೆ ಶ್ರೀಗಳು ಆಗಮಿಸುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಅಲ್ಲದೆ ಘಟನೆಯಲ್ಲಿ ಮೃತರಾದ ಇತರ ಮೂವರನ್ನು ಕುಂದಗೋಳ ನಿವಾಸಿ ಶಂಕರಗೌಡ ಪಾಟೀಲ್, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಹಾದೇವ ಕಾಡೇಶಗೌಳ ಮತ್ತು ಮಾರುತಿ ಕುಕನೂರ ಚಿಕ್ಕೋಡಿ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಬಸವರಾಜ ಪೂಜಾರ, ಸಿದ್ದಪ್ಪ ಇಂಗಳ್ಳಿ, ಸೋಮಲಿಂಗ ದೇಸಾಯಿ ಎಂಬುವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Jan 26, 2020, 4:06 PM IST

ABOUT THE AUTHOR

...view details