ಹುಬ್ಬಳ್ಳಿ:ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳ ಬಂಧಿಸುವಲ್ಲಿ ಕಸಬಾಪೇಟ ಪೊಲೀಸರು ಯಶಸ್ವಿಯಾಗಿದ್ದಾರೆ. ಉಲ್ಪಥ್ ಅಲಿಯಾಸ್ ನಾಮ್, ಮಲಿಕ್, ಹಾಗೂ ಮುಬಾರಕ್ ಅಲಿಯಾಸ್ ಟುಬೋ ಬಂಧಿತರು. ನಿನ್ನೆ ಹಳೇ ಹುಬ್ಬಳ್ಳಿಯ ಉದ್ಯಮ್ ನಗರದ ಬಳಿ ಬುಕ್ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗುತ್ತಿದ್ದ 36 ವರ್ಷದ ಮಹಿಳೆಗೆ ಚಾಕು ತೋರಿಸಿ ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: ಮೂವರು ಪೊಲೀಸರ ವಶಕ್ಕೆ - ETV Bharat Kannada
ಊಟಕ್ಕೆ ಹೋಗುತ್ತಿದ್ದ ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದರಿಂದ ಭಯಗೊಂಡ ಮಹಿಳೆ ಜೋರಾಗಿ ಕಿರಿಚಿದ್ದಾರೆ. ಕಿರುಚಾಟದ ಶಬ್ದ ಕೇಳಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಹೊರ ಬಂದಿದ್ದಾರೆ. ಆಗ ಆರೋಪಿಗಳಾದ ಉಲ್ಪಥ್, ಮಲಿಕ್ ಹಾಗೂ ಮುಬಾರಕ್ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಮಹಿಳೆ ಕಸಬಾಪೇಟ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೋಲಿಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮಹಿಳೆ ಸಂಬಂಧಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ