ಕರ್ನಾಟಕ

karnataka

ETV Bharat / state

ಇಡೀ ರಾತ್ರಿ ಕೈಯಲ್ಲೇ ಗ್ಲೂಕೋಸ್ ಬಾಟಲಿ ಹಿಡಿದ ರೋಗಿ: ಹುಬ್ಬಳ್ಳಿ ಕಿಮ್ಸ್​ನಲ್ಲಿ ಮತ್ತೊಂದು ಎಡವಟ್ಟು!

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಯು ಇಡೀ ರಾತ್ರಿ ಕೈಯಲ್ಲೇ ಗ್ಲೂಕೋಸ್ ಬಾಟಲಿ ಹಿಡಿದುಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ. ಘಟನೆಯ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ಲೂಕೋಸ್ ಬಾಟಲಿಯ ಒಂದು ಸ್ಟ್ಯಾಂಡ್​ ಅನ್ನೂ ಇಡಲಾಗದಷ್ಟು ಬೇಜವಾಬ್ದಾರಿ ಯಾಕೆ ಎಂಬ ಪ್ರಶ್ನೆ ಮೂಡಿದೆ.

patient holds glucose bottle
patient holds glucose bottle

By

Published : Jun 19, 2020, 1:37 PM IST

ಹುಬ್ಬಳ್ಳಿ: ಗ್ಲೂಕೋಸ್​ ಬಾಟಲಿಗೆ ಸ್ಟ್ಯಾಂಡ್ ನೀಡದೇ ಅದನ್ನು ರೋಗಿಯ ಕೈಯಲ್ಲೇ ಹಿಡಿಸಿರುವ ಪ್ರಕರಣ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಚಿಕಿತ್ಸೆಗೆ ದಾಖಲಾಗಿರುವ ರೋಗಿಯ ಕೈಯಲ್ಲೇ ಗ್ಲೂಕೋಸ್ ಬಾಟಲಿ ಹಿಡಿಸುವ ಮೂಲಕ ಕಿಮ್ಸ್ ಸಿಬ್ಬಂದಿ ನಿಷ್ಕಾಳಜಿ ತೋರಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಆಗಾಗ ಏನಾದರೊಂದು ಎಡವಟ್ಟು ಕೆಲಸ ಮಾಡುವ ಕಿಮ್ಸ್​, ಈ ಬಾರಿ ರೋಗಿಯ ಕೈಯಲ್ಲೇ ಆತನಿಗೆ ನೀಡಲಾದ ಸಲೈನ್ ಬಾಟಲಿ ಹಿಡಿಸಿರುವ ದೃಶ್ಯದ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಯು ಇಡೀ ರಾತ್ರಿ ಕೈಯಲ್ಲೇ ಗ್ಲೂಕೋಸ್ ಬಾಟಲಿ ಹಿಡಿದುಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ. ಘಟನೆಯ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ಲೂಕೋಸ್ ಬಾಟಲಿಯ ಒಂದು ಸ್ಟ್ಯಾಂಡ್​ ಅನ್ನೂ ಸಹ ಇಡಲಾಗದಷ್ಟು ಬೇಜವಾಬ್ದಾರಿ ಯಾಕೆ ಎಂಬ ಪ್ರಶ್ನೆ ಮೂಡಿದೆ.

ABOUT THE AUTHOR

...view details