ಕರ್ನಾಟಕ

karnataka

ETV Bharat / state

ಪಾಪು ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸಬೇಡಿ: ಕುಟುಂಬದವರ ಮನವಿ

ನಾಡೋಜ ಪಾಟೀಲ್ ಪುಟ್ಟಪ್ಪ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ ಮಾಡಿರುವ ಕುಟುಂಬ ವರ್ಗದವರು, ಪಾಪು ಆರೋಗ್ಯವಾಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

By

Published : Feb 25, 2020, 12:16 PM IST

Updated : Feb 25, 2020, 1:22 PM IST

Papu is healthy
ಪಾಟೀಲ್ ಪುಟ್ಟಪ್ಪ ಆರೋಗ್ಯದಲ್ಲಿ ಚೇತರಿಕೆ

ಹುಬ್ಬಳ್ಳಿ:ನಾಡೋಜ ಪಾಟೀಲ್ ಪುಟ್ಟಪ್ಪ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ ಮಾಡಿರುವ ಕುಟುಂಬ ವರ್ಗದವರು, ಪಾಪು ಆರೋಗ್ಯವಾಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಪುಟ್ಟಪ್ಪ ಅವರು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಎರಡು ವಾರದಿಂದ ಚಿಕಿತ್ಸೆ ‌ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ‌‌. ಅವರು ಚೇತರಿಸಿಕೊಂಡಿದ್ದು, ಗಂಜಿ ಸೇವಿಸುತ್ತಿದ್ದಾರೆ ಎಂದಿದ್ದಾರೆ.

ಪಾಟೀಲ್ ಪುಟ್ಟಪ್ಪ ಆರೋಗ್ಯದಲ್ಲಿ ಚೇತರಿಕೆ

ಅವರ ಜೊತೆ ಆಪ್ತರು ಹಾಗೂ ಕುಟುಂಬದವರ ಮಾತನಾಡುತ್ತಿದ್ದು, ಯಾರೂ ಸುಳ್ಳು ಸುದ್ದಿ ಹರಡದಂತೆ ಪಾಪು ಕುಟುಂಬದವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪಾಟೀಲ್ ಪುಟ್ಟಪ್ಪ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವದಂತಿ ಕೇಳಿಬರುತ್ತಿದೆ. ಅದೆಲ್ಲಾ ಸುಳ್ಳು ಅವರು ಆರೋಗ್ಯವಾಗಿದ್ದಾರೆ ಎಂದು ಕಿಮ್ಸ್​​​​​ ನಿರ್ದೇಶಕ ಡಾ. ರಾಮಲಿಂಗಪ್ಪ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಾಪು ಅವರ ಆರೋಗ್ಯ ಚೆನ್ನಾಗಿದೆ. ಕಿಡ್ನಿ ತೊಂದರೆ, ಬಿಪಿ ಇವೆಲ್ಲವನ್ನು ಸ್ಕ್ಯಾನ್ ಮಾಡಲಾಗಿದೆ. ನಾಳೆ ಒಂದು ಸಣ್ಣದೊಂದು ಆಪರೇಷನ್ ಇದೆ. ಅವರು ಆರೋಗ್ಯವಾಗಿದ್ದಾರೆ. ಇನ್ನೇರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದ್ರು.

Last Updated : Feb 25, 2020, 1:22 PM IST

ABOUT THE AUTHOR

...view details