ಕರ್ನಾಟಕ

karnataka

By

Published : Apr 17, 2020, 8:11 PM IST

ETV Bharat / state

ಮದ್ಯ ಪ್ರಿಯರೇ ಹುಷಾರ್​​: ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ!

ಹುಬ್ಬಳ್ಳಿಯ ಗೋಕುಲ್ ರಸ್ತೆಯ ತೇಜ್ ಲಿಕ್ಕರ್ ಶಾಪ್​​​​ ಹೆಸರು ಬಳಸಿಕೊಂಡು ನಕಲಿ ಫೇಸ್​​​​​ಬುಕ್ ಸೃಷ್ಟಿಸಿ ಮದ್ಯವನ್ನು ಆನ್​​ಲೈನ್ ಡೆಲಿವರಿ ನೀಡಲಾಗುವುದು ಎಂದು ಜಾಹೀರಾತು ಹರಿಯಬಿಟ್ಟಿದ್ದಾರೆ. ವಿಷಯ ತಿಳಿದ ಲಿಕ್ಕರ್ ಶಾಪ್ ಮಾಲೀಕ ಅಕ್ಷಯ್ ಪವಾರ್ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಏ. 11 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Online Cheating For Alchohaliq peoples
ಮದ್ಯ ಪ್ರೀಯರೇ ಎಚ್ಚರ

ಹುಬ್ಬಳ್ಳಿ:ಲಾಕ್​​ ಡೌನ್​​​​ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಲು ಸ್ಕೆಚ್​ ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಕೆಲವು ವಂಚಕರು ಗೋಕುಲ್ ರಸ್ತೆಯ ತೇಜ್ ಲಿಕ್ಕರ್ ಶಾಪ್​​​​ ಹೆಸರು ಬಳಸಿಕೊಂಡು ನಕಲಿ ಫೇಸ್​​​​​ಬುಕ್ ಸೃಷ್ಟಿಸಿ ಮದ್ಯವನ್ನು ಆನ್​​ಲೈನ್ ಡೆಲಿವರಿ ನೀಡಲಾಗುವುದು ಎಂದು ಜಾಹೀರಾತು ಹರಿಬಿಟ್ಟಿದ್ದಾರೆ. ವಿಷಯ ತಿಳಿದ ಲಿಕ್ಕರ್ ಶಾಪ್ ಮಾಲೀಕ ಅಕ್ಷಯ್ ಪವಾರ್ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಏ. 11 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮದ್ಯ ಪ್ರಿಯರೇ ಎಚ್ಚರ

ಆದರೂ ಕೂಡ ವಂಚಕರು ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಮದ್ಯ ಪೂರೈಸುವುದಕ್ಕೂ ಮುನ್ನ ಗೂಗಲ್ ಪೇ ಅಥವಾ ಪೆಟಿಎಂ ಮೂಲಕ ಹಣ ಕಟ್ಟಿಸಿಕೊಂಡು ವಂಚನೆ ಮಾಡುವುದನ್ನು ಸ್ಥಳಿಯರೊಬ್ಬರು ವಾಯ್ಸ್​ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.

ABOUT THE AUTHOR

...view details