ಕರ್ನಾಟಕ

karnataka

ಕಮಲೇಶ ತಿವಾರಿ ಹತ್ಯೆ ಪ್ರಕರಣ: ಲಖನೌ ಪೊಲೀಸರ ವಶಕ್ಕೆ ಮಹ್ಮದ್ ಸಾಧಿಕ್

ಉತ್ತರ ಪ್ರದೇಶದ ಹಿಂದೂ ಸಮಾಜ ಪಕ್ಷದ ಮುಖಂಡ ಕಮಲೇಶ ತಿವಾರಿ ಹತ್ಯೆಯಲ್ಲಿ ಮಹ್ಮದ್ ಸಾಧಿಕ್ ಕೈವಾಡವಿದೆ ಎಂದು ಶಂಕಿಸಿದ ಲಖನೌ ಪೊಲೀಸರು, ಹುಬ್ಬಳ್ಳಿಯಿಂದ ಲಖನೌಗೆ ಕರೆದೊಯ್ದಿದ್ದಾರೆ.

By

Published : Nov 9, 2019, 3:28 PM IST

Published : Nov 9, 2019, 3:28 PM IST

ETV Bharat / state

ಕಮಲೇಶ ತಿವಾರಿ ಹತ್ಯೆ ಪ್ರಕರಣ: ಲಖನೌ ಪೊಲೀಸರ ವಶಕ್ಕೆ ಮಹ್ಮದ್ ಸಾಧಿಕ್

ಮಹ್ಮದ್ ಸಾಧಿಕ್

ಹುಬ್ಬಳ್ಳಿ:ಕೆಲವು ದಿನಗಳ ಹಿಂದೆ ಐಎಸ್ ಡಿ ವಶದಲ್ಲಿದ್ದ ನಗರದ ಮಹ್ಮದ್ ಸಾಧಿಕ್ ನನ್ನು ಮತ್ತೆ ಲಖನೌ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಹಿಂದೂ ಸಮಾಜ ಪಕ್ಷದ ಮುಖಂಡ ಕಮಲೇಶ ತಿವಾರಿ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದ ಹಿನ್ನೆಲೆ, ಲಖನೌ ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ.

ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ(ಐ.ಎಸ್.ಡಿ) ಎರಡು ವಾರದ ಹಿಂದಷ್ಟೇ ಸಾಧಿಕ್ ನನ್ನು ಬೆಂಗಳೂರಿಗೆ ಕರೆದೊಯ್ದು ಎರಡು ದಿನ ವಿಚಾರಣೆ ನಡೆಸಿ, ಹುಬ್ಬಳ್ಳಿ ಪೊಲೀಸರ ವಶಕ್ಕೆ ನೀಡಿದ್ದರು. ನಂತರ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದರು.

ತಿವಾರಿ ಹತ್ಯೆ ಆರೋಪದಲ್ಲಿ ನಾಗಪುರದಲ್ಲಿ ಬಂಧನವಾಗಿದ್ದ ಪ್ರಮುಖ ಆರೋಪಿ ಸಯ್ಯದ್ ಆಸಿಂ ಅಲಿ ಜೊತೆ ಸಾಧಿಕ್ ನಿಕಟ ಸಂಬಂಧ ಹೊಂದಿದ್ದು, ನಿರಂತರ ದೂರವಾಣಿ ಸಂಪರ್ಕದಲ್ಲಿದ್ದ ಎನ್ನುವ ಮಾಹಿತಿ ತನಿಖಾ ತಂಡಕ್ಕೆ ದೊರಕಿತ್ತು. ಅಲ್ಲದೆ, ಐ.ಎಸ್.ಡಿ ವಿಚಾರಣೆ ವೇಳೆ ಹೆಚ್ಚಿನ ಮಾಹಿತಿಗಾಗಿ ಬ್ರೈನ್​​ ಮ್ಯಾಪಿಂಗ್ ಮಾಡಲಾಗಿತ್ತು. ಅದರ ವರದಿ ಅನ್ವಯ ಸಾಧಿಕ್ ಸಹ ಪ್ರಮುಖ ಆರೋಪಿ ಎನ್ನುವ ಅನುಮಾನದ ಮೇಲೆ ಮತ್ತೆ ವಶಕ್ಕೆ ಪಡೆಯಲಾಗಿದೆ.

ಲಖನೌದಿಂದ ಬಂದ ಇಬ್ಬರು ಪೊಲೀಸ್ ಅಧಿಕಾರಿಗಳು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸಾಧಿಕ್ ನನ್ನು ವಶಕ್ಕೆ ಪಡೆದು, ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ಲಖನೌಗೆ ಕರೆದುಕೊಂಡು ಹೋಗಿದ್ದಾರೆ.

ABOUT THE AUTHOR

...view details