ಕರ್ನಾಟಕ

karnataka

ETV Bharat / state

ಮುಂಗಾರು ಬೆಳೆ ಹಾನಿ: ಮೆಣಸಿನಕಾಯಿ ಹೊಲ ಹರಗಿ ಆಕ್ರೋಶ....!

ಅತಿವೃಷ್ಟಿ ಹೊಡೆತಕ್ಕೆ ಸಿಲುಕಿದ ಬೆಳೆಗಳು ಇಳುವರಿ ಕಳೆದುಕೊಂಡಿರುವ ಪರಿಣಾಮ ಹೊಲದ ತುಂಬೆಲ್ಲಾ ಹುಲ್ಲು ಕಸ ಬೆಳೆದಿದೆ. ಇದರಿಂದ ರೋಸಿ ಹೋದ ರೈತ ರೂಟರ್ ಮೂಲಕ ಇಡಿ ಹೊಲವನ್ನೇ ಹರಗಿಸಿದ್ದಾನೆ.

By

Published : Oct 29, 2020, 10:08 PM IST

Monsoon crop damage
ಮುಂಗಾರು ಬೆಳೆ ಹಾನಿ: ಮೆಣಸಿನಕಾಯಿ ಹೊಲ ಹರಗಿ ಆಕ್ರೋಶ

ಹುಬ್ಬಳ್ಳಿ:ಸತತ ಎರಡು ವರ್ಷದಿಂದ ಕಾಡುತ್ತಿರುವ ಅತಿವೃಷ್ಟಿಗೆ ಅನ್ನದಾತನ ಪಾಡು ಸಂಕಷ್ಟಕ್ಕೆ ಸಿಲುಕಿದೆ. ಸಾಲ ಮಾಡಿ ಭೂಮಿಗೆ ಬಿತ್ತಿದ ಬೆಳೆ ಹಾಳಾಗಿ ಹೋಗಿರುವ ಪರಿಣಾಮ ಸದ್ಯ ಈಗ ರೈತರು ಹೋಲದಲ್ಲಿರುವ ಮೆಣಸಿನಕಾಯಿ ಹರಗಿಸಿದ್ದಾರೆ.

ಹೌದು, ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಬಸವರಾಜ ಯೋಗಪ್ಪನವರ ಎಂಬ ರೈತ ತಮ್ಮ ನಾಲ್ಕು ಎಕರೆ ಹೊಲದಲ್ಲಿ ಮೆಣಸಿನ ಗಿಡ ಬೆಳೆಸಿದ್ದು, ಅತಿವೃಷ್ಟಿ ಹೊಡೆತಕ್ಕೆ ಸಿಲುಕಿದ ಬೆಳೆಗಳು ಇಳುವರಿ ಕಳೆದುಕೊಂಡಿರುವ ಪರಿಣಾಮ ಹೊಲದ ತುಂಬೆಲ್ಲಾ ಹುಲ್ಲು ಕಸ ಬೆಳೆದಿದೆ ಇದರಿಂದ ರೋಷಿ ಹೋದ ರೈತ ರೂಟರ್ ಮೂಲಕ ಇಡಿ ಹೊಲವನ್ನೇ ಹರಗಿಸಿದ್ದಾನೆ.

ಇನ್ನು ಹಿಂಗಾರಿನ ಮೇಲೆ ಭರವಸೆ ಹೊತ್ತು ಕುಳಿತು ಸರ್ಕಾರ ನೀಡುವ ಪರಿಹಾರ ಬೆಳೆವಿಮೆಗೆ ಕಾಯುತ್ತಿದ್ದಾನೆ. ಶೇಂಗಾ, ಹತ್ತಿ ಬೆಳೆಗಳಲ್ಲಿ ವಿಪರೀತ ಇಳುವರಿಯನ್ನು ಕಳೆದುಕೊಂಡಿರುವ ರೈತ ಸದ್ಯದ ಪರಿಸ್ಥಿತಿಯಲ್ಲಿ ತಾನೇ ಬೆಳೆಸಿದ ಮೆಣಸಿನಕಾಯಿ ಗಿಡಗಳನ್ನು ಹರಗಿಸಿ ಕಿತ್ತೋಗೆದು ಹಿಂಗಾರು ಬಿತ್ತನೆಗಾಗಿ ಭೂಮಿಯನ್ನ ಮತ್ತೆ ಸಿದ್ದತೆ ನಡೆಸಿ ಮುಂಗಾರು ಬೆಳೆ ಹಾನಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕುಂದಗೋಳ ತಾಲೂಕು ಮೆಣಸಿನಕಾಯಿ ಬೆಳೆ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದ್ದು ಈಗ ಅದು ಹಾಳಾಗಿ ರೈತರು ಕಂಗಲಾಗುವಂತೆ ಮಾಡಿದೆ.

ABOUT THE AUTHOR

...view details