ಕರ್ನಾಟಕ

karnataka

ETV Bharat / state

ಜನತಾ ದರ್ಶನದಲ್ಲಿ 197 ಅರ್ಜಿ ಸ್ವೀಕಾರ: ಭೂ, ಡ್ರಗ್ಸ್ ಮಾಫಿಯಾ ತಡೆಗಟ್ಟಲು ಕ್ರಮ ಎಂದ ಸಚಿವರು

ಧಾರವಾಡದಲ್ಲಿ ಸಂತೋಷ್​ ಲಾಡ್​ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನದಲ್ಲಿಂದು 197 ಜನರು ತಮ್ಮ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಿದ್ದಾರೆ.

ಸಚಿವ ಲಾಡ್​ ಅಧ್ಯಕ್ಷತೆಯಲ್ಲಿ  ಜನತಾ ದರ್ಶನ
ಸಚಿವ ಲಾಡ್​ ಅಧ್ಯಕ್ಷತೆಯಲ್ಲಿ ಜನತಾ ದರ್ಶನ

By ETV Bharat Karnataka Team

Published : Nov 6, 2023, 5:44 PM IST

ಧಾರವಾಡ: ಇಂದಿನ ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಹಾಗೂ ಪಟ್ಟಣಗಳಿಂದ ಆಗಮಿಸಿದ್ದ ಸಾರ್ವಜನಿಕರು ಸುಮಾರು 197 ಅಹವಾಲುಗಳನ್ನು ಸಲ್ಲಿಸಿದ್ದು, ನಿಯಮಾನುಸಾರ ಪರಿಶೀಲಿಸಿ, ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ಹೇಳಿದರು.

ಜನತಾ ದರ್ಶನ ಕಾರ್ಯಕ್ರಮದ ಬಳಿಕ ಮಾಹಿತಿ ನೀಡಿದ ಅವರು, ಸಾರ್ವಜನಿಕರ ಅಹವಾಲುಗಳಲ್ಲಿ ವಸತಿ, ಪೋಡಿ, ವಾಟ್ನಿ, ಹೊಲಗಳಿಗೆ ದಾರಿ ಹಾಗೂ ವೈಯಕ್ತಿಕ ಸಮಸ್ಯೆಗಳ ಕುರಿತು ಅರ್ಜಿ ಬಂದಿವೆ. ಅವುಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ, ಇತ್ಯರ್ಥ ಮಾಡಲಿದ್ದಾರೆ. ಸರ್ಕಾರದ ಹಂತದಲ್ಲಿ ಆಗಬೇಕಾದ ಇತ್ಯರ್ಥಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

197 ಅರ್ಜಿ ಸ್ವೀಕಾರ:ಇಂದಿನ ಜನತಾ ದರ್ಶನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 57, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ ಇಲಾಖೆಗೆ ಸಂಬಂಧಿಸಿದ 25, ಮಹಾನಗರ ಪಾಲಿಕೆಗೆ ಸಂಬಂಧಿಸಿದ 55 ಹಾಗೂ ಇತರ ಇಲಾಖೆಗಳಿಗೆ ಸಂಬಂಧಿಸಿದ 60 ಅರ್ಜಿಗಳು ಸೇರಿದಂತೆ ಒಟ್ಟು 197 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಭೂ, ಡ್ರಗ್ಸ್ ಮಾಫಿಯಾ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ:ಜಿಲ್ಲೆಯಲ್ಲಿ ಭೂ ಮಾಫಿಯಾ ಮತ್ತು ಡ್ರಗ್ಸ್ ಮಾಫಿಯಾ ತಡೆಗಟ್ಟಲು ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ, ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇತ್ತೀಚೆಗೆ ಧಾರವಾಡ ನಗರದಲ್ಲಿ ಅನಧಿಕೃತವಾಗಿ ಮನೆ ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಿ, ಮನೆ ಕೆಡವಲು ಬಳಸಿದ್ದ ಜೆಸಿಬಿ ಸೀಜ್ ಮಾಡಲಾಗಿದೆ. ಇಂತಹ ಆತುರ, ಅನ್ಯಾಯದ ಕ್ರಮಗಳನ್ನು ಸಹಿಸುವುದಿಲ್ಲ. ಯಾರೇ ಆಗಿದ್ದರೂ ಕಠಿಣ ಕ್ರಮಕೈಗೊಳ್ಳುವುದಾಗಿ ಸಚಿವರು ಎಚ್ಚರಿಸಿದರು.

ಭೂ, ಡ್ರಗ್ಸ್ ಮಾಫಿಯಾ ತಡೆಗಟ್ಟಲು ಸಾರ್ವಜನಿಕರ ಸಹಕಾರವೂ ಮುಖ್ಯ. ಯಾವುದೇ ಸ್ಥಳದಲ್ಲಿ ಇಂತಹ ಅಕ್ರಮಗಳು, ಡ್ರಗ್ಸ್ ಸಂಗ್ರಹ, ಮಾರಾಟದ ಮಾಹಿತಿ ಇದ್ದರೆ, ನೇರವಾಗಿ ನನಗೆ, ಡಿಸಿ, ಎಸ್ಪಿ ಅಥವಾ ಪೊಲೀಸ್​ ಕಮಿಷನರ್ ಅವರಿಗೆ ಕರೆ ಮಾಡಿ ತಿಳಿಸಲಿ. ಅಂತಹ ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಪೊಲೀಸ್ ಕಾವಲು ಮತ್ತು ದಾಳಿಗಳ ಹೆಚ್ಚಳದಿಂದಾಗಿ ಹೆಚ್ಚು ಹೆಚ್ಚು ಪ್ರಕರಣಗಳು ಈಗ ಬೆಳಕಿಗೆ ಬರುತ್ತಿವೆ. ಪೊಲೀಸ್ ಇಲಾಖೆ ಚುರುಕಾಗಿ ಕಾರ್ಯ ಮಾಡುತ್ತಿದೆ. ಅವರು ಇನ್ನೂ ಆ್ಯಕ್ಟಿವ್ ಆಗಿ ಕೆಲಸ ಮಾಡಲು ಸೂಚಿಸಲಾಗಿದೆ ಎಂದರು.

ಸೂರಿನ ಭರವಸೆ ನೀಡಿದ ಲಾಡ್:ಜಿಲ್ಲಾ ಜನತಾ ದರ್ಶನದಲ್ಲಿ ಮನೆಗಾಗಿ ಸಚಿವರಿಗೆ ವಿಶೇಷಚೇತನ ಮಹಿಳೆಯೊಬ್ಬರು ಮನವಿ ಸಲ್ಲಿಸಿದರು. ಅವರು ಬರುತ್ತಿದ್ದಂತೆ ಕೆಳಗೆ ಕುಳಿತು ವಿಕಲಚೇತನೆ ಮನವಿಯನ್ನು ಲಾಡ್ ಆಲಿಸಿದರು. ಧಾರವಾಡ ತಾಲೂಕಿನ ಚಿಕ್ಕಮಲಿಗೆವಾಡ ಗ್ರಾಮದ ಶಂಕ್ರಮ್ಮ ಏಣಗಿ ಎಂಬ ವಿಶೇಷ ಚೇತನ ಮಹಿಳೆ ಮನೆ ಇಲ್ಲದೇ ಅಲೆದಾಡುತ್ತಿದ್ದಾರೆ. ಇರೋದಕ್ಕೆ ಮನೆ ಇಲ್ಲ ಬಾಡಿಗೆ ಮನೆಯಲ್ಲಿ ಇದ್ದೇನೆ ದಯಮಾಡಿ ನನಗೆ ಸರ್ಕಾರಿ ಯೋಜನೆಯಲ್ಲಿ ಮನೆ ಕೊಡಿಸಿ ಎಂದು ಕೇಳಿದರು. ಅದಕ್ಕೆ ಸಚಿವ ಲಾಡ್ ಸಕಾರಾತ್ಮಕ ಭರವಸೆ ನೀಡಿದರು.

ಇದನ್ನೂ ಓದಿ:ಡಿಸೆಂಬರ್​ನಲ್ಲಿ ರಾಜ್ಯ ಸರ್ಕಾರ ದಿವಾಳಿ, ಆರೋಗ್ಯ ಸರಿಯಾದ ಬಳಿಕ ಡಿಕೆಶಿ ಜೈಲಿಗೆ: ಶಾಸಕ ಯತ್ನಾಳ್

ABOUT THE AUTHOR

...view details