ಹುಬ್ಬಳ್ಳಿ:ಶೋಭಾ ಕರಂದ್ಲಾಜೆ ಅನಗತ್ಯವಾಗಿ ನಮ್ಮ ಪಕ್ಷದ ಬಗ್ಗೆ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡೋಕೆ ಶೋಭಾ ಕರಂದ್ಲಾಜೆ ಯಾರು? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಮೀರ್, ಶೋಭಾ ಅವರು ಮೊದಲು ಅವರ ಪಾರ್ಟಿನಾ ನೋಡಿಕೊಳ್ಳಲಿ. ಯಡಿಯೂರಪ್ಪ ಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಅವರ ಬಗ್ಗೆ ಶೋಭಾ ಮಾತನಾಡುತ್ತಿದ್ದಾರಾ ಎಂದು ವ್ಯಂಗ್ಯವಾಡಿದರು.