ಧಾರವಾಡ:ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ ಎಸ್ಡಿಎಗೆ 2 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ಧಾರವಾಡದ 3ನೇ ಅಪರ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಧಾರವಾಡ: ಎಸಿಬಿ ಬಲೆಗೆ ಬಿದ್ದಿದ್ದ ಎಸ್ಡಿಎಗೆ 2 ವರ್ಷ ಜೈಲು ಶಿಕ್ಷೆ - Dharvad latest news
ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕನೋರ್ವ ಈಗ ಜೈಲು ಕಂಬಿ ಎಣಿಸುವ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಕಲಘಟಗಿಯ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಅನಿಲ ಕುಮಾರ ಡಿ.ಎಸ್. ಅವರ ವಿರುದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
ಕಲಘಟಗಿಯ ನಿವಾಸಿ ಸಹದೇವ ಹರಮಣ್ಣವರ ಅವರು ದೇವಿಕೊಪ್ಪ ಗ್ರಾಮದಲ್ಲಿ ಖರೀದಿಸಿದ್ದ 1 ಎಕರೆ 21 ಗುಂಟೆ ಜಮೀನಿನಲ್ಲಿ ಅವರ ಹೆಸರು ನಮೂದಿಸಲು 15 ಸಾವಿರ ರೂಪಾಯಿ ಮೌಲ್ಯದ ಸಾಗವಾನಿ ಕಟ್ಟಿಗೆಯ ಕುರ್ಚಿಗಳನ್ನು ನೀಡುವಂತೆ ಲಂಚದ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ 2016ರ ಡಿ.14 ರಂದು ಸಹದೇವ ಅವರ ಬಳಿ ಕುರ್ಚಿ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.