ಹುಬ್ಬಳ್ಳಿ: ವಿಶ್ವ ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ದೇಶ ಡಿಜಿಟಲೀಕರಣದತ್ತ ಮುನ್ನುಗ್ಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ವಿಶ್ವ ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ.. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಜಿಎಸ್‌ಟಿ ಹಾಗೂ ನೋಟ್ಬ್ಯಾನ್ನಿಂದ ಭಾರತದ ಆರ್ಥಿಕ ವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಕಾರ್ಪೊರೇಟ್ ಟ್ಯಾಕ್ಸ್‌ನ ಕಡಿಮೆ ಮಾಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹುಬ್ಬಳ್ಳಿಯ ಭಾರತೀಯ ಲೆಕ್ಕಪರಿಶೋಧಕರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಎಸ್‌ಟಿ ಹಾಗೂ ನೋಟ್ಬ್ಯಾನ್ನಿಂದ ಭಾರತ ಆರ್ಥಿಕ ವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಕಾರ್ಪೊರೇಟ್ ಟ್ಯಾಕ್ಸ್‌ನ ಕಡಿಮೆ ಮಾಡಿದ್ದೇವೆ. ಅದರ ಉದ್ದೇಶ ಎಲ್ಲವೂ ಸುಧಾರಣೆಯಾಗಬೇಕು ಎಂಬುದಾಗಿದೆ ಎಂದರು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಕೆಲಸ ಬಹಳ ಮುಖ್ಯ ಎಂದರು. ನೀವು ನಿಮ್ಮ ಹತ್ತಿರ ಬರುವ ತೆರಿಗೆದಾರರಿಗೆ ತೆರಿಗೆ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ದೇಶಕ್ಕೆ ನಿಮ್ಮ ಕೊಡುಗೆ ಮಹತ್ತರವಾದದು. ನಾವು ವ್ಯವಸ್ಥೆಯನ್ನ ಸರಳೀಕರಣಗೊಳಿಸಿಲು ಪ್ರಯತ್ನಿಸುತ್ತಿದ್ದೇವೆ ಎಂದರು.