ಕರ್ನಾಟಕ

karnataka

ETV Bharat / state

ರಿವಾಲ್ವರ್​ ಇಲ್ಲದೆ ಪೇಪರ್​ ಹುಲಿಗಳಾದ ಹುಬ್ಬಳ್ಳಿ ಪೊಲೀಸರು... ಕಾನೂನು ಸುವ್ಯವಸ್ಥೆ ಹೇಗೆ ಸಾಧ್ಯ? - revolver

ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರ ಟೊಂಕದಲ್ಲಿರಬೇಕಾಗಿದ್ದ ಸರ್ವಿಸ್ ರಿವಾಲ್ವರ್ ಅವರ ಮನೆ ಹಾಗೂ ಆಫೀಸಲ್ಲಿವೆ. ಈ ಹಿನ್ನೆಲೆ ಪೊಲೀಸರು ಎಲ್ಲೇ ಹೋದರು ಕಾನೂನು ನಿಯಂತ್ರಣ ತರಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ರಿವಾಲ್ವರ್​ ಇಲ್ಲದೆ ಪೇಪರ್​ ಹುಲಿಗಳಾದ ಹುಬ್ಬಳ್ಳಿ ಪೊಲೀಸರು

By

Published : Sep 23, 2019, 5:23 PM IST

Updated : Sep 23, 2019, 9:31 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅವ್ಯಾಹತವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ. ಶೂಟೌಟ್​ಗಳು ನಡೆಯುತ್ತಿದ್ದರೂ ಪೊಲೀಸರು ಇದನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಕಾರಣ ಅವರ ಬಳಿ ರಿವಾಲ್ವರ್​ ಇಲ್ಲದಿರುವುದು.

ಹೌದು, ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರ ಟೊಂಕದಲ್ಲಿರಬೇಕಾಗಿದ್ದ ಸರ್ವಿಸ್ ರಿವಾಲ್ವರ್ ಮಾಯವಾಗಿವೆ. ಹೀಗಾಗಿ ಆರಕ್ಷಕರು ಪೇಪರ್​ ಹುಲಿಯಾಗಿದ್ದಾರೆ. ಹುಬ್ಬಳ್ಳಿ‌ ಪೊಲೀಸರ ಬಳಿ ರಿವಾಲ್ವರ್​ಗಳೇ ಇಲ್ಲವಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ರಿವಾಲ್ವರ್​ ಇಲ್ಲದೆ ​ ಕೆಲಸ ನಿರ್ವಹಿಸುವ ಹುಬ್ಬಳ್ಳಿ ಪೊಲೀಸರು.

ಪೊಲೀಸ್ ಅಧಿಕಾರಿಗಳು ರಿವಾಲ್ವರ್​ಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಆದರೆ, ಇವರು ಕೆಲವೊಂದು ವೇಳೆ ಹೊರತುಪಡಿಸಿದ್ರೆ ಇನ್ನುಳಿದ ಸಮಯದಲ್ಲಿ ರಿವಾಲ್ವರ್​ ಇರುವುದಿಲ್ಲ. ಅವುಗಳನ್ನು ಮನೆಯಲ್ಲೋ ಅಥವಾ ಆಫೀಸಿನಲ್ಲೋ ಇಟ್ಟು ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆ ಯಾವ ಪುಡಿ ರೌಡಿಗಳು ಇವರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

Last Updated : Sep 23, 2019, 9:31 PM IST

ABOUT THE AUTHOR

...view details